ರಾಷ್ಟ್ರೀಯ

ಕೇರಳದಲ್ಲಿ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿ ದುರುಪಯೋಗ: ದೂರು ಸ್ವೀಕರಿಸಿದ ಲೋಕಾಯುಕ್ತ

Pinterest LinkedIn Tumblr

ತಿರುವನಂತಪುರಂ: ಕೇರಳದಲ್ಲಿ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿ(ಸಿಎಂಡಿಆರ್‌ಎಫ್‌) ದುರುಪಯೋಗವಾಗಿದೆ ಎಂದು ಆಪಾದಿಸಿ ಸಲ್ಲಿಸಲಾಗಿರುವ ದೂರಿಗೆ ಸಂಬಂಧಿಸಿ ಲೋಕಾಯಕ್ತರು ಸಿಎಂ ಪಿಣರಾಯಿ ವಿಜಯನ್‌ ಮತ್ತು ಇತರ ಮಂತ್ರಿಗಳಿಗೆ ನೋಟಿಸ್‌ ನೀಡಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿ ಸಿ. ಕುರಿಯಕೋಸ್‌ ಮತ್ತು ಉಪಲೋಕಾಯುಕ್ತರಾದ ಕೆ.ಪಿ. ಬಾಲಚಂದ್ರನ್‌, ಎ.ಕೆ.ಬಶೀರ್‌ ಅವರು ಮಂಗಳವಾರ ದೂರನ್ನು ಸ್ವೀಕರಿಸಲು ನಿರ್ಧರಿಸಿದರು.

ಲೋಕಾಯುಕ್ತರು ಸಿಎಂಡಿಆರ್‌ಎಫ್‌ ಬಗ್ಗೆ ತನಿಖೆ ನಡೆಸಬಹುದೇ ಎಂಬ ಬಗ್ಗೆ ಸಂಸ್ಥೆಯೊಳಗೆ ಗೊಂದಲ ಏರ್ಪಟ್ಟು ಬಹು ಚರ್ಚೆಯ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳಿಗೆ ತಮ್ಮ ಹೆಸರಿನ ನಿಧಿಯನ್ನು ಬೇರೆ ಬೇರೆ ಕಾರ್ಯಗಳಿಗೆ ಬಳಸಿಕೊಳ್ಳುವ ಅಧಿಕಾರವಿರುತ್ತದೆ ಎಂಬ ಅಭಿಪ್ರಾಯವನ್ನು ಒಬ್ಬ ಉಪಲೋಕಾಯುಕ್ತರು ವ್ಯಕ್ತಪಡಿಸಿದ್ದರು.

Comments are closed.