ಕರ್ನಾಟಕ

ಬಿಜೆಪಿಗೆ ಸರಕಾರ ರಚನೆಗೆ ಅವಕಾಶ ಸಿಗಬೇಕಾದರೆ ಮೈತ್ರಿ ಸರಕಾರದ 12 ಶಾಸಕರು ರಾಜೀನಾಮೆ ನೀಡಿಬೇಕಿದೆ

Pinterest LinkedIn Tumblr


ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಇಬ್ಬರು ಪಕ್ಷೇತರ ಶಾಸಕರು ವಾಪಸ್​ ಪಡೆಯುವ ಮೂಲಕ ದೋಸ್ತಿ ನಾಯಕರಲ್ಲಿ ನಡುಕ ಹುಟ್ಟಿಸಿದ್ದಾರೆ. ಇವರು ಬೆಂಬಲ ವಾಪಸ್ ಪಡೆದಿದ್ದರಿಂದ ಸರ್ಕಾರದ ಅಸ್ತಿತ್ವಕ್ಕೆ ಯಾವುದೇ ದಕ್ಕೆ ಇಲ್ಲ. ಏಕೆಂದರೆ ಕಾಂಗ್ರೆಸ್​ ಹಾಗೂ ಜೆಡಿಎಸ್​ ಎರಡೂ ಪಕ್ಷಗಳ ಶಾಸಕರ ಸಂಖ್ಯೆ ಬಹುಮತಕ್ಕೆ ಬೇಕಾದ ಸಂಖ್ಯೆಗಿಂತಲೂ ಹೆಚ್ಚಾಗಿಯೇ ಇದೆ. ಒಂದು ವೇಳೆ ಈ ಸರ್ಕಾರ ಪತನವಾಗಬೇಕು ಎಂದರೆ ಆರು ಶಾಸಕರು ರಾಜೀನಾಮೆ ನೀಡಬೇಕಾಗಿದೆ.

ಸರ್ಕಾರ ರಚನೆಗೆ ಬೇಕಾಗಿದೆ ಮ್ಯಾಜಿಕ್ ನಂಬರ್

ವಿಧಾನಸಭೆಯಲ್ಲಿ ಒಟ್ಟು ಸಂಖ್ಯಾಬಲ 224. ಇದರಲ್ಲಿ ಕಾಂಗ್ರೆಸ್ – 80, ಜೆಡಿಎಸ್ – 37, ಬಿಎಸ್ ಪಿ -1, ಬಿಜೆಪಿ – 104 ಹಾಗೂ ಪಕ್ಷೇತರ -2 ಶಾಸಕರು ಇದ್ದಾರೆ. ಈಗಾಗಲೇ ಸಮ್ಮಿಶ್ರ ಸರ್ಕಾರಕ್ಕೆ ಇಬ್ಬರು ಪಕ್ಷೇತರರು ಬೆಂಬಲ ವಾಪಸ್ ಪಡೆದಿದ್ದಾರೆ. ಇದರಿಂದ ಮೈತ್ರಿ ಸರ್ಕಾರದ ಸಂಖ್ಯಾಬಲ 120 ರಿಂದ 118 ಕ್ಕೆ ಕುಸಿದಿದೆ. 118ರ ಸಂಖ್ಯಾ ಬಲದಲ್ಲಿ ಸ್ಪೀಕರ್ ಕೂಡ ಇದ್ದಾರೆ.

ಆದರೆ, ಸದನದಲ್ಲಿ ವಿಶ್ವಾಸ ಮತಯಾಚನೆ ವೇಳೆ ಆಡಳಿತ ಮತ್ತು ವಿರೋಧ ಪಕ್ಷಗಳ ಸಂಖ್ಯಾಬಲ ಸಮವಾದಾಗ ಮಾತ್ರ ಸ್ಪೀಕರ್‌ ಮತ ಹಾಕಲು ಅವಕಾಶ ನೀಡುತ್ತಾರೆ. ಸದನದಲ್ಲಿ ಬಿಜೆಪಿ 104 ಸಂಖ್ಯಾಬಲವಿದ್ದು, ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ನೀಡಿದರೆ ಅವರ ಸಂಖ್ಯೆ 106ಕ್ಕೆ ಏರಿಕೆಯಾಗಲಿದೆ.

118 ಸಂಖ್ಯಾಬಲ ಇರುವ ಸಮ್ಮಿಶ್ರ ಸರ್ಕಾರ ಪತನವಾಗಬೇಕಾದರೆ, ಆರು ಮಂದಿ ರಾಜೀನಾಮೆ ನೀಡಬೇಕು. ಆಗ ಬಹುಮತಕ್ಕೆ ಬೇಕಾದ 113 ಸ್ಥಾನಕ್ಕಿಂತ ಕಾಂಗ್ರೆಸ್​-ಜೆಡಿಎಸ್​ ಸದಸ್ಯರ ಸಂಖ್ಯೆ 112ಕ್ಕೆ ಕುಸಿಯುತ್ತದೆ. ಆದರೆ ಇಷ್ಟು ಇಷ್ಟು ರಾಜೀನಾಮೆ ನೀಡುವುದರಿಂದ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ಸಿಗುವುದಿಲ್ಲ.

ಕನಿಷ್ಠ ಪಕ್ಷ ದೋಸ್ತಿ ಪಕ್ಷಗಳ 12 ಶಾಸಕರು ರಾಜೀನಾಮೆ ನೀಡಿದಾಗ ಮಾತ್ರ ಸರ್ಕಾರ ಅಲ್ಪಸಂಖ್ಯೆಗೆ ಕುಸಿಯಲಿದೆ. ಆಗ ಸರ್ಕಾರ ರಚನೆಯ ಸಂಖ್ಯಾಬಲ 105ಕ್ಕೆ ಕುಸಿಯುತ್ತದೆ. ಈಗಾದಾಗ ಮಾತ್ರ ಬಿಜೆಪಿ ಸರ್ಕಾರ ರಚಿಸಬಹುದು. ಕಾಂಗ್ರೆಸ್- ಜೆಡಿಎಸ್‌ನ 12 ಶಾಸಕರು ಖುದ್ದು ಸ್ಪೀಕರ್ ಭೇಟಿ ಮಾಡಿ ರಾಜೀನಾಮೆ ಕೊಡಬೇಕು.

ಬಿಜೆಪಿ ಮುಂದಿನ ನಡೆ ಏನು ?

12 ಮಂದಿ ರಾಜೀನಾಮೆ ನೀಡಿದರೆ ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ಬಹುಮತ ಸಾಬೀತುಪಡಿಸುವಂತೆ ಒತ್ತಾಯಿಸುವುದು. ರಾಜ್ಯಪಾಲರಿಗೆ ಮನವರಿಕೆ ಮಾಡಲು ಯತ್ನಿಸಿದರೂ ಆಗದಿದ್ದಲ್ಲಿ‌ ಅಂತಿಮವಾಗಿ ಬಿಜೆಪಿ ನಾಯಕರು ತಮ್ಮ ಬೆಂಬಲಿಗ ಪಕ್ಷೇತರ ಶಾಸಕರ ಜೊತೆ ರಾಜಭವನಕ್ಕೆ ತರಳಿ ಪರೇಡ್ ಮಾಡಬಹುದು ಎನ್ನಲಾಗಿದೆ.

Comments are closed.