ಕರ್ನಾಟಕ

ಆಪರೇಷನ್ ಕಮಲ ನಡೆದರೂ ಕುಮಾರಸ್ವಾಮಿ ಕೂಲ್: ಕಾರಣ ಬಿಚ್ಚಿಟ್ಟ ಆಪ್ತ ಸಚಿವ

Pinterest LinkedIn Tumblr


ಬೆಂಗಳೂರು: ಮೈತ್ರಿ ಸರ್ಕಾರ ಬಿದ್ದೇ ಹೋಗುತ್ತೆ ಅನ್ನೋ ಮಟ್ಟಿಗೆ ಬೆಳವಣಿಗೆ ನಡೀತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇಬ್ಬರು ಶಾಸಕರು ಕೂಡ ಬೆಂಬಲ್ ವಾಪಾಸ್ ಪಡೆದಿದ್ದಾರೆ.

ಅಷ್ಟೇ ಅಲ್ಲದೇ ಕೆಲ ಅತೃಪ್ತ ಶಾಸಕರು ಬಿಜೆಪಿ ಸಂಪರ್ಕದಲ್ಲಿರುವುದು ಕಾಂಗ್ರೆಸ್ ಪಾಳಯದಲ್ಲಿ ಕೋಲಹಲವೇ ಸೃಷ್ಟಿಯಾಗಿದೆ. ಆದ್ರೆ. ದಳಪತಿಗಳು ಮಾತ್ರ ಯಾಕೋ ಇದನ್ನ ಸೀರಿಯಸ್ಸಾಗಿ ತೆಗೆದುಕೊಂಡಂತಿಲ್ಲ.

ಕಾಂಗ್ರೆಸ್ ನಾಯಕರ ಜೊತೆ ಸಿಎಂ ಚರ್ಚೆ ನಡೆಸಿದ್ದು ಬಿಟ್ಟರೆ. ಅಷ್ಟೇನು ಸಿಎಂ ಆತಂಕಕ್ಕೊಳಗಾಗಿಲ್ಲ. ಪಕ್ಷೇತರರು ಬೆಂಬಲ ವಾಪಸ್ ಪಡೆದರೆ ಸರ್ಕಾರವೇನು ಬಿದ್ದು ಹೋಗುತ್ತಾ ಎಂದು ಪ್ರಶ್ನಿಸಿದ ಸಿಎಂ, ಕೂಲ್ ಕೂಲ್ ಆಗಿ ತಮ್ಮ ಪುತ್ರ ನಟಿಸಿರುವ ಕುರುಕ್ಷೇತ್ರ ಚಿತ್ರದ ಟೀಸರ್ ವೀಕ್ಷಿಸಿದರು.

ಮತ್ತೊಂದೆಡೆ ದೇವೇಗೌಡರು ಅಷ್ಟೇ ಕೂಲಾಗಿದ್ದಾರೆ. ಎಐಸಿಸಿ ಅಧ್ಯಕ್ಷರು ದೂರವಾಣಿ ಕರೆ ಮಾಡಿ ವಾಟ್ ಈಸ್ ಹ್ಯಾಪನಿಂಗ್ ಎಂದು ಗೌಡರಿಗೆ ಕೇಳಿದ್ದಾರೆ.

ಆದರೆ.. ಗೌಡರು ಮಾತ್ರ ನಾನು ಟೀ ಕುಡಿಯುತ್ತಾ ಮೊಮ್ಮಕ್ಕಳ ಜೊತೆ ಕಾಲ ಕಳೀತಿದ್ದೀನಿ. ನೆಮ್ಮದಿಯಾಗಿ ಸಂಕ್ರಾಂತಿ ಆಚರಣೆ ಮಾಡ್ತಿದ್ದೀನಿ ಎಂದು ರಿಯಾಕ್ಟ್ ಮಾಡಿದ್ದಾರೆ.

ದಳಪತಿಗಳ ಕೂಲ್ ಕೂಲ್ ಸೀಕ್ರೆಟ್ ಏನು ಗೊತ್ತಾ..?

ದಳಪತಿಗಳು ಇಷ್ಟೊಂದು ಆರಾಮಾಗಿರೋದರ ಹಿಂದೆಯೂ ಒಂದು ಸೀಕ್ರೆಟ್ ಅಡಗಿದಿಯಂತೆ. ಅದೇನೆಂದರೆ ಬಿಜೆಪಿ 8 ಶಾಸಕರು ಜೆಡಿಎಸ್ ಸಂಪರ್ಕದಲ್ಲಿ ಇದ್ದಾರಂತೆ. ಇಂಥದ್ದೊಂದು ಸ್ಫೋಟಕ ಮಾಹಿತಿಯನ್ನ ಸಿಎಂ ಆಪ್ತ ಸಚಿವರೊಬ್ಬರು ಮಾಹಿತಿ ಕೊಟ್ಟಿದ್ದಾರೆ.

ಪ್ರಸಕ್ತ ರಾಜ್ಯ ರಾಜಕಾರಣದ ಬೆಳವಣಿಗೆಗಳು

ಕಾಂಗ್ರೆಸ್-ಜೆಡಿಎಸ್ ಸರ್ಕಾರಕ್ಕೆ ಬೆಂಬಲಿಸಲು ಬಿಜೆಪಿಯಲ್ಲೂ ರೆಡಿ ಇದ್ದಾರೆ. ಬಿಜೆಪಿ ರೆಸಾರ್ಟ್ ನಿಂದ ಶಾಸಕರನ್ನ ಬಿಟ್ಟು ನೋಡಲಿ. ಆಗ ಚಿತ್ರಣವೇ ಬದಲಾಗುತ್ತೆ ಎಂದು ಸಿಎಂ ಆಪ್ತ ಸಚಿವರು ಹೇಳಿದ್ದಾರೆ.

ಇದೇ ಕಾರಣಕ್ಕೆ ಜೆಡಿಎಸ್ ನಾಯಕರು ಯಾವುದೇ ಕಾರಣಕ್ಕೂ ಟೆನ್ಯನ್ ತೆಗೆದುಕೊಳ್ಳದೇ ಕೂಲ್ ಆಗಿಯೇ ಬಿಜೆಪಿಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದಾರೆ.

Comments are closed.