ಕರ್ನಾಟಕ

‘ನಾನು ಬದುಕಿದ್ದಾಗ ಯಾರೂ ಲೈಕ್ ಮಾಡಿಲ್ಲ, ಈಗ ನಾನು ಸಾಯುವ ವೀಡಿಯೋ ಆದರೂ ಲೈಕ್ ಮಾಡಿ’ ಎಂದು ವೀಡಿಯೊ ಮಾಡಿ ವಿದ್ಯಾರ್ಥಿನಿ ಆತ್ಮಹತ್ಯೆ

Pinterest LinkedIn Tumblr

ಮೈಸೂರು: ಬದುಕಿದ್ದಾಗಂತೂ ನನ್ನನ್ನು ಯಾರೂ ಲೈಕ್ ಮಾಡಿಲ್ಲ ಈಗ ಸಾಯುವ ವೀಡಿಯೋವನ್ನಾದರೂ ಲೈಕ್ ಮಾಡಿ, ಶೇರ್ ಮಾಡಿ ಎಂದು ವೀಡಿಯೋ ಮಾಡಿಟ್ಟು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಓದು ತಲೆಗೆ ಹತ್ತುತ್ತಿಲ್ಲ ಎಂದು ಖಿನ್ನತೆಗೆ ಒಳಗಾಗಿದ್ದ ಮೈಸೂರಿನ ಬನ್ನಿಮಂಟಪದ ಕಾವೇರಿ ನಗರ ನಿವಾಸಿ ಯಾಸ್ಮಿನ್​ ತಾಜ್​ (18) ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈಕೆ ಮೈಸೂರಿನ ಜೆ.ಎಸ್​.ಎಸ್​. ಕಾಲೇಜಿನ ಕಾಮರ್ಸ್​ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುನ್ನ ವೀಡಿಯೋ ಮಾಡಿಟ್ಟೂ ಇದನ್ನು ಶೇರ್ ಮಾಡುವಂತೆಯೂ ವಿನಂತಿಸಿದ್ದಾಳೆ.”ನಾನು ಎಷ್ಟೇ ಓದಬೇಕೆಂದುಕೊಂಡರೂ ಓದು ನನಗೆ ತಲೆಗೆ ಹತ್ತುತ್ತಿಲ್ಲ. ನಾನು ಸಿಂಗರ್ ಅಥವಾ ಲಾಯರ್ ಆಗಬೇಕೆಂದಿದ್ದು ವಿಧಿ ನನ್ನಾಸೆಯನ್ನು ಪೂರೈಸಲು ಅವಕಾಶ ನೀಡಿಲ್ಲ, ನನಗೆ ಆರೋಗ್ಯ ಸಮಸ್ಯೆಯೂ ಇದ್ದ ಕಾರಣ ಕಾಲೇಜಿಗೆ ಸರಿಯಾಗಿ ಹೋಗಲೂ ಆಗಿರಲಿಲ್ಲ. ಈ ಕಾರಣಕ್ಕೆ ನನಗೆ ಪರೀಕ್ಷೆಗೆ ಹಾಲ್ ಟಿಕೆಟ್ ಸಹ ಸಿಕ್ಕಿಲ್ಲ.

“ನಾನು ಜೀವನದಲ್ಲಿ ಏನನ್ನೂ ಸಾಧಿಸಲಾಗಲಿಲ್ಲ. ನಾನು ಬದುಕಿದ್ದಾಗಯಾರೂ ಲೈಕ್ ಮಾಡಿಲ್ಲ, ಈಗ ನಾನು ಸಾಯುವ ವೀಡಿಯೋ ಆದರೂ ಲೈಕ್ ಮಾಡಿ ಶೇರ್ ಮಾಡಿ. ಈ ಮೂಲಕ ಯಾಸ್ಮಿನ್ ಸತ್ತಳೆಂಬ ಸುದ್ದಿ ಎಲ್ಲರಿಗೆ ತಿಳಿಯಲಿ” ಎಂದು ತೆಲುಗಿನಲ್ಲಿ ಹೇಳಿರುವ ವೀಡಿಯೋ ಶೇರ್ ಮಾಡಿಕೊಂಡಿದ್ದಾಳೆ. ಘಟನೆ ಕುರಿತು ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.