ಮನೋರಂಜನೆ

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಅಕ್ಷತಾ ಪಾಂಡವಪುರ

Pinterest LinkedIn Tumblr

ಅಕ್ಷತಾ ಪಾಂಡವಪುರ ಈ ವಾರ ಮನೆಯಿಂದ ಹೊರ ನಡೆದಿದ್ದಾರೆ. ಈ ಮೂಲಕ ಮನೆಯಲ್ಲಿ 84 ದಿನಗಳ ಪ್ರಯಾಣವನ್ನು ಪೂರ್ಣಗೊಳಿಸಿದ್ದಾರೆ. ಮೂಲತಃ ನಟಿಯಾಗಿರುವ ಅವರು ಮನೆ ಒಳಗೆ ಸೇರಿಕೊಂಡಾಗಿನಿಂದಲೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಮಾಡುತ್ತಲೇ ಇದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿ ಸ್ಪರ್ಧಿ ರಾಕೇಶ್​ ಅವರ ಜೊತೆ ಅಕ್ಷತಾ ಕ್ಲೋಸ್​ ಆಗಿ ವರ್ತಿಸಿದ್ದರು.

ಆ್ಯಂಡಿ , ರಶ್ಮಿ, ಶಶಿ, ಅಕ್ಷತಾ, ರಾಕೇಶ್ ನಾಮಿನೇಟ್ ಆಗಿದ್ದರು. ಕಳೆದ ವಾರ ಜೀವಿತಾ ಹಾಗೂ ಒಗ್ಗರಣೆ ಡಬ್ಬಿ ಮುರಳಿ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದರು.

ಬಿಗ್ ಬಾಸ್ ಮನೆಗೆ ಕುಟುಂಬಸ್ಥರು ಬಂದಾಗ ಸ್ಪರ್ಧಿಗಳಲ್ಲಿ ಉಂಟಾದ ಸಂತಸದ ಬಗ್ಗೆ ಸುದೀಪ್ ಕೇಳಿ ತಿಳಿದುಕೊಂಡರು. ಸ್ಪರ್ಧಿಗಳು ಸಹ ಅಷ್ಟೇ ಉತ್ಸುಕತೆಯಿಂದ ತಮ್ಮ ಅನುಭವವನ್ನು ಹಂಚಿಕೊಂಡರು.

ಎಲ್ಲರನ್ನೂ ತಮಾಷೆಯಿಂದಲೇ ಮಾತನಾಡಿಸುತ್ತ ಅಸಲಿ ಆಟಕ್ಕೆ ಇಳಿದ ಸುದೀಪ್, ಎಂದಿನಂತೆ ಪ್ರತಿಯೊಬ್ಬರನ್ನು ವಿಚಾರಿಸಿಕೊಂಡರು. ಕೆಲವರ ಕಾಲೆಳೆದರೆ, ಇನ್ನು ಕೆಲವರರಿಗೆ ತಿಳಿ ಹೇಳುವ ಕೆಲಸ ಮಾಡಿದರು.

ಕಾರಿನಲ್ಲಿ ಕುಳಿತುಕೊಳ್ಳುವ ಲಕ್ಸುರಿ ಟಾಸ್ಕ್‌ ವಿಜೇತ ನವೀನ ಅವರಿಗೆ ಡೈರೆಕ್ಟ್ ಫಿನಾಲೆ ಟಿಕೆಟ್ ನೀಡಿದರು.

ಅದಾದ ಬಳಿಕ ಈ ಬಾರಿ ಮನೆಯಲ್ಲಿ ಯಾರು ಸೇಫ್ ಎಂಬುದನ್ನು ಹೇಳುತ್ತಾ ಹೋದರು. ಕೊನೆಗೆ ಅಕ್ಷತಾ ಪಾಂಡವಪುರ ಅವರನ್ನು ಮನೆಯಿಂದ ಹೊರ ಹೋಗಲು ಸೂಚಿಸಲಾಯಿತು.

Comments are closed.