ಮನೋರಂಜನೆ

‘ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ನಟನೆಯನ್ನು ಟೀಕಿಸುತ್ತಿರುವವರ ಬಗ್ಗೆ ನಟ ಅನುಪಮ್ ಖೇರ್ ಹೇಳಿದ್ದೇನು…?

Pinterest LinkedIn Tumblr

ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರದಲ್ಲಿ ನಟಿಸಿರುವ ಅನುಪಮ್ ಖೇರ್ ತಮ್ಮನ್ನು ಟೀಕಿಸುತ್ತಿರುವವರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಮ್ಮ ಟೀಕಾಕಾರರಿಗೆ ಬಲವಾದ ರಾಜಕೀಯ ಉದ್ದೇಶವಿದೆ ಎಂದು ಹೇಳಿದ್ದಾರೆ.

“ನೀವು ಏನೇ ಮಾಡಿದರೂ ನಿಮ್ಮನ್ನು ಕಾಲೆಳೆಯುವವರು ಇದ್ದೇ ಇರುತ್ತಾರೆ. ಸಿನಿಮಾಗಳನ್ನೂ ಟೀಕೆ ಮಾಡಲಾಗುತ್ತಿದೆ. ನಾನು ಯಾವುದೇ ಟೀಕೆಗಳನ್ನು ಅಥವಾ ಸಿನಿಮಾ ವಿಮರ್ಶೆಗಳನ್ನೂ ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ. ಯಾವುದೇ ರೀತಿಯ ಟೀಕೆ ವ್ಯಕ್ತಿಯ ಅಭಿಪ್ರಾಯವಷ್ಟೇ ಎಂದು ಅನುಪಮ್ ಖೇರ್ ಹೇಳಿದ್ದಾರೆ.

ಆದರೆ ಈಗ ಮನಮೋಹನ್ ಸಿಂಗ್ ಪಾತ್ರದಲ್ಲಿ ನನ್ನ ನಟನೆಗೆ ಟೀಕೆ ವ್ಯಕ್ತವಾಗುತ್ತಿದ್ದು, ನನ್ನ ಅಭಿನಯವನ್ನು ಟೀಕಿಸುತ್ತಿರುವವರಿಗೆ ಬಲವಾದ ರಾಜಕೀಯ ಉದ್ದೇಶವಿದೆ ಎಂದು ಅನುಪಮ್ ಖೇರ್ ಅಭಿಪ್ರಾಯಪಟ್ಟಿದ್ದಾರೆ.

Comments are closed.