ಕರ್ನಾಟಕ

ಜನಸಾಮಾನ್ಯರ ದನಿಯಾಗಲು ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿತ್ತೇನೆ: ಪ್ರಕಾಶ್ ರೈ

Pinterest LinkedIn Tumblr


ಬೆಂಗಳೂರು: ಲೋಕಸಭೆಯಲ್ಲಿ ಜನಸಾಮಾನ್ಯರ ದನಿಯಾಗಬೇಕಿದೆ. ಈ ಉದ್ದೇಶದಿಂದ ನಾನು ರಾಜಕೀಯಕ್ಕೆ ಬರುತ್ತಿದ್ದೇನೆ. ಸ್ವತಂತ್ರ ಅಭ್ಯರ್ಥಿಯಾಗಿ ನಾನು ಬೆಂಗಳೂರು ಕೇಂದ್ರೀಯ ಕ್ಷೇತ್ರದಿಂದ ಈ ಚುನಾವಣೆಯಲ್ಲಿ ಸ್ಪರ್ಧಿತ್ತೇನೆ ಎಂದು ನಟ ಪ್ರಕಾಶ್ ರೈ ತಿಳಿಸಿದ್ದಾರೆ.

‘ಅಯೋಧ್ಯೆಯ ಹಿಂದೂ ಮುಸ್ಲಿಂರ ಭಾವೈಕ್ಯತೆ ನೋಡಲು ಬನ್ನಿ’ ಎಂಬ ಶೀರ್ಷಿಕೆಯಲ್ಲಿ ಚಿತ್ರಕಲಾ ಪರಿಷತ್‌ನಲ್ಲಿ ಏರ್ಪಡಿಸಲಾಗಿದ್ದ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಸದ್ಯಕ್ಕೆ ನನ್ನ ಸ್ಪರ್ಧೆ ವಿಚಾರ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಪಕ್ಷದ ಪ್ರಣಾಳಿಕೆ ಮತ್ತಿತರ ವಿಚಾರಗಳ ಬಗ್ಗೆ ಸದ್ಯದಲ್ಲೇ ಹೇಳುತ್ತೇನೆ. ನಾನು ಯಾರ ಬೆಂಬಲ ಕೂಡ ಕೇಳಲು ಹೋಗಿಲ್ಲ. ಆಮ್ ಆದ್ಮಿ ಕೂಡ ನನ್ನ ಬೆಂಬಲಕ್ಕೆ ಬರುತ್ತಿದೆ. ಅದೇ ರೀತಿ ತುಂಬ ಜನ ನನ್ನ ಬೆಂಬಲಕ್ಕೆ ಬರುತ್ತಿದ್ದಾರೆ. ಮತ ಹಾಕಿದವರ ದನಿಯಾಗಿ ನಾವು ಲೋಕಸಭೆಯಲ್ಲಿ ಮಾತನಾಡಬೇಕಿದೆ ಎಂದರು.

ಕೇಂದ್ರ ಸರಕಾರ ಮೇಲ್ವರ್ಗದ ಜನರಿಗೂ ಶೇ.10 ರಷ್ಟು ಮೀಸಲು ನೀಡಿರುವ ವಿಚಾರ ಸಂಬಂಧ ಪಟ್ಟಂತೆ ಪ್ರತಿಕ್ರಿಯಿಸಿ, ನಮ್ಮ ದೇಶದಲ್ಲಿ ಇರುವುದೇ ಎರಡು ಜಾತಿ. ಒಂದು ಹಣ ಇರುವವರು, ಮತ್ತೊಂದು ಹಣವಿಲ್ಲದೇ ಇರುವವರು. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲು ಕೊಟ್ಟರೆ ತಪ್ಪಿಲ್ಲ. ಆದರೆ ಇದೂ ಕೂಡ ಮೋದಿಯ ಸುಳ್ಳುಗಳಲ್ಲಿ ಒಂದಾಗಬಾರದು. ಪ್ರತಿಯೊಬ್ಬರ ಖಾತೆಗೂ ರು. ಹದಿನೈದು ಲಕ್ಷ ಬರುತ್ತೆ ಎಂದು ಹೇಳಿದ್ದರು. ಅದೇ ರೀತಿ ಇದೂ ಕೂಡ ಸುಳ್ಳು ಆಗಬಾರದು ಎಂದರು.

Comments are closed.