ಕರ್ನಾಟಕ

ಇಂದಿನಿಂದ ಐದು ದಿನ ಬ್ಯಾಂಕ್​ಗಳಿಗೆ ರಜೆ

Pinterest LinkedIn Tumblr


ಬೆಂಗಳೂರು: ಬ್ಯಾಂಕ್ ಗ್ರಾಹಕರೇ ಗಮನಿಸಿ, ಇಂದಿನಿಂದ ಬ್ಯಾಂಕ್ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ದೇಶಾದ್ಯಂತ ನಾಳೆಯಿಂದ ಐದು ದಿನಗಳ ಕಾಲ ಬ್ಯಾಂಕ್​ಗಳು ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ಎಟಿಎಂಗಳಲ್ಲಿ ಹಣದ ಕೊರತೆ ಕಾಡಲಿದ್ದು, ಗ್ರಾಹಕರು ಹಣದ ಅವಶ್ಯಕತೆ ಇದ್ದರೆ ಇಂದೇ ತೆಗೆದುಕೊಳ್ಳುವುದು ಉತ್ತಮ.

ಯೆಸ್, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ವೇತನ ಪರಿಷ್ಕರಣೆ ಬೇಡಿಕೆ ಮುಂದಿಟ್ಟುಕೊಂಡು ನಾಳೆಯಿಂದ ಮುಷ್ಕರಕ್ಕೆ ಕರೆ ನೀಡಿದೆ. ಡಿಸೆಂಬರ್​ 21ರಂದು ರಾಷ್ಟ್ರವ್ಯಾಪಿ ಮುಷ್ಕರ, ಡಿಸೆಂಬರ್ 22 ರಂದು ನಾಲ್ಕನೇ ಶನಿವಾರದ ರಜೆ ಹಾಗೂ ಡಿ.23 ಭಾನುವಾರದ ರಜೆ, ಮಂಗಳವಾರ ಡಿ.25ರಂದು ಕ್ರಿಸ್ಮಸ್ ಪ್ರಯುಕ್ತ ರಜೆ. ಡಿ.26ರಂದು ಮತ್ತೆ ಸಿಬ್ಬಂದಿಯಿಂದ ರಾಷ್ಟ್ರವ್ಯಾಪಿ ಮುಷ್ಕರ ನಡೆಯಲಿದೆ. ಇದರ ನಡುವೆ ಒಂದು ದಿನ ಡಿಸೆಂಬರ್ 24ರಂದು ಮಾತ್ರ ಬ್ಯಾಂಕ್​ಗಳು ಕಾರ್ಯನಿರ್ವಹಿಸಲಿವೆ.

ವೇತನ ಪರಿಷ್ಕರಣೆ ವಿಷಯ ಸಂಬಂಧ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ವಿರುದ್ಧ ಡಿ.21ರಂದು ಎಐಬಿಒಸಿ ಮುಷ್ಕರಕ್ಕೆ ಕರೆ ನೀಡಿದೆ. ಬ್ಯಾಂಕ್​ ಆಫ್ ಬರೋಡಾ, ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್​ಗಳ ವಿಲೀನವನ್ನು ವಿರೋಧಿಸಿ ಯುಎಫ್​ಬಿಯು ಡಿ.26ರಂದು ಮುಷ್ಕರಕ್ಕೆ ಕರೆ ನೀಡಿದೆ. ಅಂದಿನ ಮುಷ್ಕರಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ಬ್ಯಾಂಕ್​ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಚಲಂ, ಈ ಮುಷ್ಕರ ಬ್ಯಾಂಕ್ ವಿಲೀನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಎಂದು ಹೇಳಿದ್ದಾರೆ.

Comments are closed.