ರಾಷ್ಟ್ರೀಯ

ಮದುವೆ ಮನೆಯಲ್ಲಿ ಪುರುಷರು, ಮಹಿಳೆಯರು ಒಟ್ಟಿಗೆ ಊಟ ಮಾಡುವುದು ಇಸ್ಲಾಂಗೆ ವಿರುದ್ಧ!

Pinterest LinkedIn Tumblr


ಮುಜಾಫರ್‌ನಗರ: ಉತ್ತರ ಪ್ರದೇಶದ ದೇವಬಂದ್‌ ಮೂಲದ ದರೂಲ್‌ ಉಲೂಮ ಹೊಸದೊಂದು ಫತ್ವಾ ಹೊರಡಿಸಿದೆ. ಯಾವುದೇ ಕಾರ್ಯಕ್ರಮಗಳಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಊಟ ಮಾಡುವುದು ಇಸ್ಲಾಂ ಧರ್ಮಕ್ಕೆ ವಿರುದ್ಧ ಎಂದು ಹೇಳಿದೆ. ನಿಂತುಕೊಂಡು ಊಟ ಮಾಡುವುದೂ ಸರಿಯಲ್ಲ ಎಂದಿದೆ.

ದೇವಬಂದ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹೊಸ ಫತ್ವಾ ಹೊರಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೆಸರು ಹೇಳಲು ಇಚ್ಛಿಸದ ದೇವಬಂದ್‌ನ ನಿವಾಸಿಯೊಬ್ಬರು ಧಾರ್ಮಿಕ ಕಾರ್ಯಕ್ರಮದಲ್ಲಿ ಏನೇನು ನಡೆಯಿತು ಎಂಬುದನ್ನು ಟೈಮ್ಸ್‌ ಆಫ್‌ ಇಂಡಿಯಾಗೆ ವಿವರಣೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನನಗೆ ಎಲ್ಲವನ್ನು ಸ್ಪಷ್ಟವಾಗಿ ಕೇಳಿಸಿಕೊಂಡಿದ್ದೇನೆ. ಇಸ್ಲಾಂ ಧರ್ಮದ ನಿಯಮಗಳ ಪ್ರಕಾರ ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಪುರುಷರು ಮತ್ತು ಮಹಿಳೆಯರು ಜತೆಯಾಗಿ ಊಟ ಮಾಡುವುದು ಷರಿಯತ್‌ ನಿಯಮಕ್ಕೆ ವಿರುದ್ಧವಾಗಿದೆ. ನಿಂತುಕೊಂಡು ಊಟ ಮಾಡುವುದನ್ನು ಷರಿಯತ್‌ ಒಪ್ಪುವುದಿಲ್ಲ ಎಂದು ಘೋಷಿಸಲಾಗಿದೆ ಎಂದು ವಿವರಿಸಿದ್ದಾರೆ.

ಮದುವೆಯಂತಹ ಕಾರ್ಯಕ್ರಮಗಳಲ್ಲಿ ಜತೆಯಾಗಿ ಊಟ ಮಾಡುವುದರಿಂದ ಮುಸ್ಲಿಂ ಸಮಾಜಕ್ಕೆ ಅಪಚಾರ ಮಾಡಿದಂತಾಗುತ್ತದೆ. ಮುಸ್ಲಿಮರು ಷರಿಯತ್‌ ನಿಯಮ ಪಾಲಿಸಬೇಕು ಎಂದು ಕರೆ ನೀಡಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಅಪರಿಚಿತ ಪುರುಷರು ಇರುವೆಡೆ ಮುಸ್ಲಿಂ ಮಹಿಳೆಯರು ಪಾಲ್ಗೊಳ್ಳುವುದು ಅಥವಾ ಆಹಾರ ಸೇವಿಸುವುದು ಸರಿಯಲ್ಲ. ಇದನ್ನು ಕ್ಷಮೆಯೇ ಇಲ್ಲದ ತಪ್ಪು. ಮುಸ್ಲಿಮರಿಗೆ ಈ ಫತ್ವಾ ಅನುಸರಿಸುವಂತೆ ಮನವಿ ಮಾಡುತ್ತೇವೆ ಎಂದು ಮುಸ್ಲಿಂ ಧರ್ಮಗುರು ತಿಳಿಸಿದ್ದಾರೆ.

ಇತ್ತೀಚೆಗೆ ದೇವಬಂದ್‌ನ ದರುಲ್‌ ಉಲೂಮ್‌ ಪುರುಷರ ಅಂಗಡಿಗಳಲ್ಲಿ ಬಳೆಗಳನ್ನು ಖರೀದಿಸುವ ವೇಳೆ ಅವರಿಂದ ಬಳೆಗಳನ್ನು ಹಾಕಿಸಿಕೊಳ್ಳಬಾರುದು ಎಂಬ ಫತ್ವಾ ಹೊರಡಿಸಿತ್ತು.

Comments are closed.