ಕರ್ನಾಟಕ

ಬಿಜೆಪಿ ಸೋಲಿಗೆ 3 ಪ್ರಮುಖ ಕಾರಣ ಹೇಳಿದ ತೋಗಾಡಿಯಾ

Pinterest LinkedIn Tumblr


ಬೆಂಗಳೂರು: ಹಿಂದುತ್ವವನ್ನು ಮರೆತ ಕಾರಣಕ್ಕೆ ಬಿಜೆಪಿ ಪಂಚ ರಾಜ್ಯಗಳ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಿದೆ ಎಂದು ಅಂತರಾಷ್ಟ್ರೀಯ ಹಿಂದು ಪರಿಷತ್‌ನ ಅಧ್ಯಕ್ಷ ಪ್ರವೀಣ್‌ ತೋಗಾಡಿಯಾ ಹೇಳಿಕೆ ನೀಡಿದ್ದಾರೆ.

ಮಂಗಳವಾರ ಕೆ.ಆರ್‌.ಪುರಂ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತೋಗಾಡಿಯಾ ಮೋದಿ ಅವರು ರೈತರು,ಹಿಂದುತ್ವ ಮತ್ತು ಯುವ ಜನರಿಗೆ ಉದ್ಯೋಗ ನೀಡಲು ಮರೆತ ಕಾರಣಕ್ಕಾಗಿ ಸೋಲಾಗಿದೆ. ಮುಂದಿನ ದಿನಗಳಲ್ಲಿ ಇದು ಇಡೀ ದೇಶದಲ್ಲಿ ಮುಂದುವರಿಯಲಿದೆ ಎಂದರು.

ಮೋದಿ ಯುವಕರ ಉದ್ಯೋಗದ ಕುರಿತು,ರೈತರ ಕುರಿತು ಚಿಂತೆ ಮಾಡಲಿಲ್ಲ ಹೀಗಾಗಿ ಜನ ಸೋಲಿಸಲು ತೀರ್ಮಾನಿಸಿದರು ಎಂದರು.

ಅಯೋಧ್ಯೆಯಲ್ಲಿ ಈಗಾಗಲೇ ರಾಮ ಮಂದಿರ ನಿರ್ಮಾಣ ಮಾಡಬೇಕಿತ್ತು,ಅದನ್ನು ನಿರ್ಲಕ್ಷಿಸಿದ ಪರಿಣಾಮ ಈಗ ಗೊತ್ತಾಗಿದೆ ಎಂದರು.

ತೊಗಾಡಿಯಾ ಅವರು ಮಾಜಿ ವಿಶ್ವಹಿಂದು ಪರಿಷದ್‌ನ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

Comments are closed.