ಮನೋರಂಜನೆ

ಲಿಪ್ ಕಿಸ್ ಕುರಿತು ಕೇಳಿದ್ದಕ್ಕೆ ಛೀ ಎಂದ ದೀಪಿಕಾ!

Pinterest LinkedIn Tumblr


ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರನ್ನು ನೀವು ಲಿಪ್ ಕಿಸ್ ಮಾಡುವುದನ್ನು ನಿಲ್ಲುಸುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಛೀ.. ಎಂದು ಉತ್ತರಿಸಿದ್ದಾರೆ.

ಫಿಲ್ಮ್ ಫೇರ್ ಮ್ಯಾಗಜೀನ್ ಸಂದರ್ಶನದಲ್ಲಿ ನಿಮಗೆ ಈಗ ಮದುವೆ ಆಗಿದೆ. ಈಗ ನೀವು ಲಿಪ್ ಕಿಸ್ ಮಾಡುವುದನ್ನು ನಿಲ್ಲಿಸುತ್ತೀರಾ ಎಂದು ಪ್ರಶ್ನಿಸಲಾಗಿತ್ತು. ಪ್ರಶ್ನೆ ಕೇಳಿದ ತಕ್ಷಣ ದೀಪಿಕಾ ತಲೆ ತಗ್ಗಿಸಿ ಛೀ.. ಎಂದು ನಗುತ್ತಾ ಪ್ರತಿಕ್ರಿಯಿಸಿದ್ದಾರೆ.

ದೀಪಿಕಾ ಸಂದರ್ಶನ ನೀಡುತ್ತಿರುವ ಪ್ರೋಮೋವೊಂದನ್ನು ಫಿಲ್ಮ್ ಫೇರ್ ತನ್ನ ಇನ್‍ಸ್ಟಾಗ್ರಾಂನಲ್ಲಿ ಹಾಕಿದೆ. ಈ ಪ್ರೋಮೋದಲ್ಲಿ ಸಂದರ್ಶಕ ದೀಪಿಕಾ ಅವರಿಗೆ ನಿಮ್ಮ ಹಣವೆಲ್ಲಾ ಮದುವೆಗೆ ಖರ್ಚು ಮಾಡುತ್ತೀರಾ? ಎಂದು ಅಭಿಮಾನಿಯೊಬ್ಬರು ಪ್ರಶ್ನೆಯನ್ನು ಕೇಳಿದ್ದರು. ಆಗ ದೀಪಿಕಾ ನನ್ನ ಬಳಿ ಸಾಕಷ್ಟು ಹಣವಿದೆ. ಯೋಚನೆ ಮಾಡಬೇಡಿ ಎಂದು ಹೇಳಿದ್ದಾರೆ.

ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಟಲಿಯ ಲೇಕ್ ಕೋಮೋದಲ್ಲಿ ನವೆಂಬರ್ 14 ಹಾಗೂ ನವೆಂಬರ್ 15ರಂದು ಕೊಂಕಣಿ ಮತ್ತು ಸಿಖ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಟಲಿಯಿಂದ ಬಂದ ನಂತರ ಈ ಜೋಡಿ ಬೆಂಗಳೂರಿನಲ್ಲಿ ಹಾಗೂ ಮುಂಬೈನಲ್ಲಿ ಎರಡು ಬಾರಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಮಾಡಿಕೊಂಡಿತು.

ಕೆಲಸದ ಒತ್ತಡದಿಂದ ದೀಪಿಕಾ ಹಾಗೂ ರಣ್‍ವೀರ್ ಸಿಂಗ್ ಇನ್ನೂ ತಮ್ಮ ಹನಿಮೂನ್ ಪ್ಲಾನ್ ಮಾಡಿಲ್ಲ. ಈ ಬಗ್ಗೆ ದೀಪಿಕಾ ಅವರನ್ನು ಪ್ರಶ್ನಿಸಿದ್ದಾಗ ಅವರು, ನನಗೆ ಏನೂ ಗೊತ್ತಿಲ್ಲ. ನಾವು ಇದುವರೆಗೂ ಯಾವುದೇ ಹನಿಮೂನ್ ಪ್ಲಾನ್ ಮಾಡಿಲ್ಲ. ರಣ್‍ವೀರ್ ಅಭಿನಯದ ‘ಸಿಂಭಾ’ ಚಿತ್ರ ಈಗ ಬಿಡುಗಡೆಯಾಗಲಿದ್ದು, ಚಿತ್ರಕ್ಕಾಗಿ ಕಾಯುತ್ತಿದ್ದೇವೆ ಎಂದು ಉತ್ತರಿಸಿದ್ದಾರೆ.

Comments are closed.