ರಾಷ್ಟ್ರೀಯ

ಪತಿಯ ಕಾಮಕ್ಕೆ 16ರ ಬಾಲಕಿಯನ್ನೇ ಮದುವೆ ಮಾಡಿಸಿದ ಹೆಂಡತಿ!

Pinterest LinkedIn Tumblr


ಭೋಪಾಲ್: 16 ವರ್ಷದ ಬಾಲಕಿಯನ್ನು ಮನೆಯಲ್ಲಿಟ್ಟುಕೊಂಡು ನಾಲ್ಕು ತಿಂಗಳು ಕಾಲ ಅತ್ಯಾಚಾರ ಎಸಗಿದ್ದ ಆರೋಪಿ ಮತ್ತು ಆತನಿಗೆ ಸಹಾಯ ಮಾಡಿದ್ದ ಪತ್ನಿಯನ್ನು ಕೋಲಾರ್ ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತ ಬಾಲಕಿಯ ದೂರು ನೀಡಿದ ಬಳಿಕ ಶನಿವಾರ ಆರೋಪಿಗಳಾದ ದಿನೇಶ್ ಪ್ರಜಾಪತಿ ಹಾಗೂ ಆತನ ಪತ್ನಿ ನಿಧಿ ಪ್ರಜಾಪತಿಯನ್ನು ಬಂಧಿಸಿದ್ದಾರೆ. ಸಂತ್ರಸ್ತೆ ಕೋಲಾರದ ನಿವಾಸಿಯಾಗಿದ್ದು, ಅವರ ಕುಟುಂಬದವರು ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸಂತ್ರಸ್ತೆಯನ್ನು ಬಂಧಿತ ದಂಪತಿ ಕಳೆದ ಜುಲೈ ನಲ್ಲಿ ಕಿಡ್ನಾಪ್ ಮಾಡಿದ್ದು, ಅನೇಕ ಬಾರಿ ಆರೋಪಿ ದಿನೇಶ್ ಅತ್ಯಾಚಾರ ಮಾಡಿದ್ದಾನೆ. ಆರೋಪಿಗೆ ಈಗಾಗಲೇ ನಾಲ್ಕು ಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ.

ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಕುಟುಂಬ ಹಾಗೂ ಆರೋಪಿ ನಿಧಿ ಕುಟುಂಬ ಇಬ್ಬರು ಚುನಾಭಟ್ಟಿಯಲ್ಲಿ ಒಂದೇ ಕಡೆ ವಾಸವಿದ್ದರು. ಸಂತ್ರಸ್ತೆ ಆರೋಪಿ ನಿಧಿ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಆಕೆಯನ್ನು ಸಂತ್ರಸ್ತೆ ಅಕ್ಕ ಎಂದು ಕರೆಯುತ್ತಿದ್ದಳು. ನಂತರ ಬಾಲಕಿಯ ಕುಟುಂಬ ಕೋಲಾರ್ ಗೆ ಶಿಫ್ಟ್ ಆಗಿತ್ತು. ಆಗಲೂ ಆರೋಪಿ ನಿಧಿ ಸಂತ್ರಸ್ತೆಯ ಜೊತೆ ಸಂಪರ್ಕದಲ್ಲಿದ್ದಳು.

ಆರೋಪಿ ನಿಧಿ ಪ್ರಜಾಪತಿ ನಮ್ಮ ಕುಟುಂಬದಲ್ಲಿ ಇಬ್ಬರನ್ನು ಮದುವೆಯಾಗುವ ಸಂಪ್ರದಾಯ ಇದೆ. ನನ್ನ ಪತಿಯ ಜೊತೆ ನಿನಗೆ ಮದುವೆ ಮಾಡಿಸುವೆ ಎಂದು ಹೇಳಿ ಕಳೆದ ಜುಲೈನಲ್ಲಿ ಗಂಜ್ ಬಸೊಡಾಕ್ಕೆ ಸಂತ್ರಸ್ತೆಯನ್ನು ಕರೆದುಕೊಂಡು ಹೋಗಿದ್ದಳು. ಬಳಿಕ ಮೋಸದಿಂದ ಆರೋಪಿ ದಿನೇಶ್ ಸಂತ್ರಸ್ತೆಯನ್ನು ಮದುವೆಯಾಗಿ ತನ್ನ ಸಂಬಂಧಿಕರ ಮನೆಯಲ್ಲಿರಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ.

ಬಳಿಕ ಅಲ್ಲಿಂದ ವಿದಿಶಾ ಜಿಲ್ಲೆಯಲ್ಲಿರುವ ಆರೋಪಿ ತನ್ನ ತಂದೆ ಮನೆಯಲ್ಲಿ ಆಕೆಯನ್ನು ಕೂಡಿ ಹಾಕಿದ್ದರು. ಈ ವೇಳೆ ಅನೇಕ ಬಾರಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ಈ ವೇಳೆ ಆರೋಪಿ ಪತ್ನಿ ನಿಧಿ ಕೂಡ ಸಂತ್ರಸ್ತೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಸಂತ್ರಸ್ತೆಗೆ ತನಗೆ ಮೋಸ ಮಾಡುತ್ತಿದ್ದಾರೆ ಎಂದು ತಿಳಿದ ತಕ್ಷಣ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಕೋಲಾರ್ ಪೊಲೀಸರಿಗೆ ದೂರು ನೀಡಿದ್ದಳು. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ದಂಪತಿಯ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.

ಸದ್ಯಕ್ಕೆ ಆರೋಪಿಗಳನ್ನು ಎಜೆಕೆ ಪೊಲೀಸ್ ಠಾಣೆಗೆ ತನಿಖೆಗಾಗಿ ಕಳುಹಿಸಿದ್ದು, ಅಲ್ಲಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಐಪಿಸಿ 366 (ಅಪಹರಣ) ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.