ಕರ್ನಾಟಕ

ಪ್ರಸಾದ ತಿಂದವರ ಹೊಟ್ಟೆಯಲ್ಲಿ ಇದ್ದದ್ದು ಮೋನೋ ಕ್ರೋಟೋಫಾಸ್ ವಿಷಕಾರಿ ಕ್ರಿಮಿನಾಶಕ..!

Pinterest LinkedIn Tumblr


ಮೈಸೂರು: ಸುಳ್ವಾಡಿ ಮಾರಮ್ಮ ದೇವಾಲಯದ ಪ್ರಸಾದದಲ್ಲಿ ಕ್ರಿಮಿನಾಶಕ ವಿಷವುಳ್ಳ ಅಂಶ ಸೇರಿದೆ. ಐಜಿಪಿ ಶರತ್​ ಚಂದ್ರ ಅವರು ಆ ಅಂಶವನ್ನು ಮೋನೋ ಕ್ರೋಟೋಫಾಸ್​ ಎಂದು ದೃಢಪಡಿಸಿದ್ದಾರೆ. ಇದು ಅತ್ಯಂತ ವಿಷಕಾರಿ ಕ್ರಿಮಿನಾಶಕ. ನಾವು ಅದರ ಅನುಗುಣವಾಗಿಯೇ ಚಿಕಿತ್ಸೆ ನೀಡಿದ್ದೇವೆ ಎಂದು ಮೈಸೂರಿನ ಜೆಎಸ್​ಎಸ್​ ಆಸ್ಪತ್ರೆ ಅಧೀಕ್ಷಕ ಎಂ.ಗುರುಸ್ವಾಮಿ ಹೇಳಿದ್ದಾರೆ.

ನ್ಯೂಸ್​ 18 ಕನ್ನಡದ ಜೊತೆ ಮಾತನಾಡಿದ ಅವರು, ಮೋನೋ ಕ್ರೋಟೋಫಾಸ್​ ಎಂಬುದು ಆರ್ಗೆನೋ ಪ್ರಾಸ್ಪರಸ್ ವಿಭಾಗದ ಒಂದು ಅತ್ಯಂತ ವಿಷಕಾರಿ ಕ್ರಿಮಿನಾಶಕ. ಅದು ದೇಹದ ಎಲ್ಲಾ ಭಾಗದಲ್ಲೂ‌ ಪರಿಣಾಮ ಬಿರುತ್ತದೆ. ನಾವು ನೋಡಿದ ರೋಗಿಗಳ ದೇಹದಲ್ಲಿ ಅಪಾರ ಪ್ರಮಾಣದ ವಿಷ ಇತ್ತು. ಅವರೆಲ್ಲರಿಗೂ ಆರ್ಗೆನೋ ಪ್ರಾಸ್ಪರಸ್ ವಿಭಾಗದಲ್ಲೇ ಚಿಕಿತ್ಸೆ ನೀಡಿದ್ದೇವೆ ಎಂದರು.

ಕೆಲವರ ದೇಹದಿಂದ ಶ್ವಾಸಕೋಸ ಹಾಗೂ ಕಿಡ್ನಿಗಳಿಗೆ ಪರಿಣಾಮ ಬೀರಿತ್ತು. ಇನ್ನು ಕೆಲವರು ಕಡಿಮೆ ಪ್ರಮಾಣದ ವಿಷ ಸೇವಿಸಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಷಕ್ಕೆ ಕಾಲ ಮಿತಿ ಇಲ್ಲ, ದೇಹದ ಆರೋಗ್ಯ ಸ್ಥಿಮಿತವೇ ಮುಖ್ಯ. ಯಾವ ಸಂದರ್ಭದಲ್ಲಿ ಬೇಕಾದರೂ ಇದು ಪರಿಣಾಮ ಬೀರಬಹುದು. ಆದರೆ ತಕ್ಷಣ ಅವರಿಗೆ ಚಿಕಿತ್ಸೆ ಅಗತ್ಯವಿರುತ್ತದೆ ಎಂದು ಹೇಳಿದರು.

ಸ್ಟಮಕ್(ಹೊಟ್ಟೆ) ವಾಶ್ ಅತ್ಯಂತ ಪ್ರಮುಖ ಚಿಕಿತ್ಸೆ ಆಗಿರುತ್ತದೆ. ಸ್ಟಮಕ್ ವಾಶ್ ಆದರೆ ಅರ್ಧ ಚಿಕಿತ್ಸೆ ನೀಡಿದಂತೆ. ಆದರೆ ಈ ಪ್ರಕರಣದಲ್ಲಿ ಸರಿಯಾಗಿ ಸ್ಟಮಕ್ ವಾಶ್ ಆಗದೆ ಇದ್ದವರೇ ಹೆಚ್ಚು ಮೃತಪಟ್ಟಿರುವ ಸಾಧ್ಯತೆ ಇದೆ. ಸದ್ಯ ಜೆಎಸ್ಎಸ್ ಆಸ್ಪತ್ರೆಯಲ್ಲಿನ 15 ಅಸ್ವಸ್ಥರಲ್ಲಿ 5 ಮಂದಿಗೆ ವೆಂಟಿಲೇಶನ್ ಚಿಕಿತ್ಸೆ ನೀಡುತ್ತಿದ್ದೇವೆ. 5 ರಲ್ಲಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದರು.

Comments are closed.