ಕರ್ನಾಟಕ

ಕೋಮಾ ಸ್ಥಿತಿಯಲ್ಲಿದ್ದ ಬಿಬಿಎಂಪಿ ಪಕ್ಷೇತರ ಸದಸ್ಯ ಏಳುಮಲೈ ನಿಧನ

Pinterest LinkedIn Tumblr

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಗಾಯಪುರಂ ವಾರ್ಡಿನ ಪಕ್ಷೇತರ ಸದಸ್ಯ ಏಳುಮಲೈ ಅವರು ತೀವ್ರ ಅನಾರೋಗ್ಯದಿಂದ ವಿಕ್ರಂ ಆಸ್ಪತ್ರೆಯಲ್ಲಿ ಗುರುವಾರ ನಸುಕಿನ ಜಾವ 1.30ರ ವೇಳೆಗೆ ವಿಧಿವಶರಾಗಿದ್ದಾರೆ.

ಸಘಾಯ್​ಪುರ ವಾರ್ಡ್​ನ ಕಾರ್ಪೋರೇಟರ್​ ಆಗಿದ್ದ ಏಳುಮಲೈ ಕಳೆದ 1 ತಿಂಗಳ ಹಿಂದೆ ಮೂಗಿನಲ್ಲಿ ಗುಳ್ಳೆಯಾಗಿದೆ ಎಂದು ಆಸ್ಪತ್ರೆಗೆ ತಪಾಸಣೆ ಮಾಡಿಸಲು ಹೋಗಿದ್ದರು. ಆಗ ಅದಕ್ಕೆ ಚಿಕಿತ್ಸೆ ನೀಡಿದ ಬಳಿಕ ಇದ್ದಕ್ಕಿದ್ದಂತೆ ಕೋಮಾ ಸ್ಥಿತಿಗೆ ಹೋಗಿದ್ದರು. ಶಸ್ತ್ರಚಿಕಿತ್ಸೆ ವೇಳೆ ಹೈಡೋಸ್​ನ ಅನಸ್ತೇಷಿಯಾ ನೀಡಿದ್ದರಿಂದ ಕೋಮಾಗೆ ಹೋಗಿದ್ದಾರೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಏಳುಮಲೈ ಅವರ ಬೆಂಬಲಿಗರು ಮತ್ತು ಕುಟುಂಬಸ್ಥರು ಆರೋಪಿಸಿ, ಗಲಾಟೆ ಮಾಡಿದ್ದರು. 20 ದಿನಗಳ ಕಾಲ ಕೋಮಾದಲ್ಲಿದ್ದ ಕಾರ್ಪೋರೇಟರ್​ ಏಳುಮಲೈ ನಿನ್ನೆ ಮಧ್ಯರಾತ್ರಿ ವಿಕ್ರಂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಬಿಬಿಎಂಪಿ ಸಮಾಜ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಏಳು ಮಲೈ ಅವರು ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿಸಿದ್ದರು. ಕ್ರಿಯಾಶೀಲ ವ್ಯಕ್ತಿತ್ವದಿಂದಾಗಿ ತಮ್ಮ ವಾರ್ಡ್​ನಲ್ಲಿಯೂ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.

Comments are closed.