ಮನೋರಂಜನೆ

ಮತ್ತಷ್ಟು ರೋಚಕ ಹುಟ್ಟುಹಾಕಿರುವ ಕೆಜಿಎಫ್ ಚಿತ್ರದ 2ನೇ ಟ್ರೈಲರ್ !

Pinterest LinkedIn Tumblr

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್​ ಚಿತ್ರದ 2ನೇ ಟ್ರೈಲರ್ ಬಿಡುಗಡೆಯಾಗಿದ್ದು, ಈ ಹಿಂದೆ ಬಿಡುಗಡೆಯಾಗಿದ್ದ ಮೊದಲ ಟ್ರೈಲರ್ ಗಿಂತಲೂ ಈಗ ಬಿಡುಗಡೆಯಾಗಿರುವ 2ನೇ ಟ್ರೈಲರ್ ಮತ್ತಷ್ಟು ರೋಚಕವಾಗಿದೆ.

ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್ ಚಿತ್ರದ ಎರಡನೇ ಟ್ರೈಲರ್​ ಬಿಡುಗಡೆಯಾಗಿದ್ದು, ಮೊದಲ ಟ್ರೈಲರ್ ಗಿಂತಲೂ ಎರಡನೇ ಟ್ರೈಲರ್ ಮತ್ತಷ್ಟು ರೋಚಕವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಚಿತ್ರದ ಮೊದಲನೇ ಟ್ರೈಲರ್​ ರಿಲೀಸ್​ ಆದ ನಂತರ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್​ವುಡ್ ನತ್ತ ತಿರುಗಿ ನೋಡುವಂತೆ ಮಾಡಿತ್ತು. ಪ್ರತಿಯೊಂದು ಡೈಲಾಗ್​ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಡಬಲ್​ ಮಾಡಿತ್ತು. ಈಗ ಎರಡನೇ ಟ್ರೈಲರ್​​ ಕೂಡ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ್ದು, ಚಿತ್ರದ ಹೈಪ್ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಟ್ರೈಲರ್ ನಲ್ಲಿ ‘ಚಿನ್ನದ ರೇಟ್​ ಹೆಚ್ಚಿದಂತೆ ಮನುಷ್ಯನ ದುರಾಸೆಯೂ ಹೆಚ್ಚಿತು. ಕೆಜಿಎಫ್​ ದೇಶದ ಅತೀ ದೊಡ್ಡ ಚಿನ್ನ ಗಣಿಗಾರಿಕೆಯ ಸ್ಥಳವಾಗಿತ್ತು. ಇದನ್ನ ಒಬ್ಬನೇ ವ್ಯಕ್ತಿ ಕಂಟ್ರೋಲ್ ಮಾಡಿದ್ರೆ ಹೇಗಿರುತ್ತೆ?’ ಅನ್ನೋ ಸಾಲುಗಳು ಚಿತ್ರದ ಕಥೆಯ ಬಗ್ಗೆ ಸುಳಿವು ಕೊಡುತ್ತೆ.

ಅಂತೆಯೇ ಯಶ್​ ಆಕ್ಷನ್​​​ ಸೀನ್ ಗಳ ಝಲಕ್​​ ಕೂಡ ಟ್ರೈಲರ್​ನಲ್ಲಿದ್ದು, ‘ಗ್ಯಾಂಗ್​ ಇಟ್ಕೊಂಡು ಬರೋನು ಗ್ಯಾಂಗ್ ಸ್ಟರ್​​ ಆಗ್ತಾನೆ… ಅವನು ಒಬ್ಬನೇ ಬರ್ತಿದ್ದ, ಆತ ಮಾನ್ ಸ್ಟರ್’​ ಅನ್ನೋ ಪಂಚಿಂಗ್​​ ಡೈಲಾಗ್ ಟ್ರೈಲರ್ ನಲ್ಲಿದೆ. ಇದೇ ಡಿಸೆಂಬರ್​​ 21ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಕೆಜಿಎಫ್​ ರಿಲೀಸ್​ ಆಗಲಿದೆ.

Comments are closed.