ಕರ್ನಾಟಕ

ಜಾವಾ 42 ಹಾಗೂ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಗುಣವೈಶಿಷ್ಟ್ಯಗಳು

Pinterest LinkedIn Tumblr


80,90ರ ದಶಕದಲ್ಲಿ ಜನರ ಮನಸ್ಸನ್ನು ಗೆದ್ದಿದ್ದ ಜಾವ ಮತ್ತೆ ರಸ್ತೆಗೆ ಇಳಿಯಲಿದೆ. ಗುರುವಾರ ಕಂಪನಿಯು ತನ್ನ ನೂತನ ಜಾವಾ, ಜಾವಾ 42 ಹಾಗೂ ಜಾವಾ ಪೆರಾಕ್ ಮಾದರಿಯ ಮೂರು ಆವೃತ್ತಿಗಳನ್ನು ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಹೀಗಾಗಿ ಜಾವಾದ ಬೈಕುಗಳು ಮತ್ತೆ ಭಾರತದ ರಸ್ತೆಗಳಲ್ಲಿ ಅಬ್ಬರಿಸಲು ಮುಂದಾಗಿವೆ.

ಈಗಾಗಲೇ ಯುವ ಮನಸ್ಸನ್ನು ಗೆದ್ದಿರುವ ರಾಯಲ್ ಎನ್‍ಫೀಲ್ಡ್ ಭಾರತದಲ್ಲಿ ಉತ್ತಮ ಮಾರುಕಟ್ಟೆಯನ್ನು ಹೊಂದಿದೆ. ತನ್ನ ನೂತನ ಆವೃತ್ತಿಗಳ ಮೂಲಕ ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ಎನ್‍ಫೀಲ್ಡ್ ಸಫಲವಾಗಿದೆ. ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಜಾವಾದ ಬೈಕುಗಳು ಎನ್‍ಫೀಲ್ಡ್ ಬೈಕುಗಳಿಗೆ ಪ್ರಬಲ ಪ್ರತಿಸ್ಪರ್ಧಿ ಎಂದೇ ಹೇಳಲಾಗುತ್ತಿದೆ. ಹೀಗಾಗಿ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕಿನ ಜೊತೆ ನೂತನ ಜಾವಾ 42 ಮಾದರಿಯ ವ್ಯತ್ಯಾಸದ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ.

ಜಾವಾ 42 ಹಾಗೂ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಗುಣವೈಶಿಷ್ಟ್ಯಗಳು:
ಎಂಜಿನ್ ಮತ್ತು ಸಸ್ಪೆನ್ಷನ್:
ಜಾವಾ 42: 293ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ 27 ಬಿಎಚ್‍ಪಿ ಜೊತೆ 28 ಎನ್‍ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ. ಫ್ರಂಟ್ ಟೆಲಿಸ್ಕೋಪಿಕ್ ಹೈಡ್ರಾಲಿಕ್ ಫೋರ್ಕ್ ಸಸ್ಪೆನ್ಷನ್ ಹೊಂದಿದ್ದು, ಹಿಂದುಗಡೆ ಗ್ಯಾಸ್ ಕ್ಯಾನಿಸ್ಟರ್-ಟ್ವಿನ್ ಶಾಕ್ ಹೈಡ್ರಾಲಿಕ್ ಸಸ್ಪೆನ್ಷನ್ ನೀಡಿದೆ. ಇದನ್ನೂ ಓದಿ: ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಜಾವಾ ಬೈಕ್: ಬೆಲೆ ಎಷ್ಟು? ನೂತನ ವೈಶಿಷ್ಟ್ಯವೇನು?

ಕ್ಲಾಸಿಕ್ 350: 346 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ 19.8-ಬಿಎಚ್‍ಪಿ 5250 ಆರ್‌ಪಿಎಂ ಜೊತೆಗೆ 28-ಎನ್‍ಎಂ ಟಾರ್ಕ್ ಹಾಗೂ 4000 ಆರ್‌ಪಿಎಂ ಉತ್ಪಾದನಾ ಶಕ್ತಿಯನ್ನು ಹೊಂದಿದೆ. ಫ್ರಂಟ್ ಸಸ್ಪೆನ್ಷನ್ ಟೆಲಿಸ್ಕೋಪಿಕ್ 35 ಎಂಎಂ ಫೋಕ್ರ್ಸ್ 130 ಎಂಎಂ ಸಸ್ಪೆನ್ಷನ್ ಹೊಂದಿದ್ದು, ಹಿಂದುಗಡೆ ಟ್ವಿನ್ ಗ್ಯಾಸ್ 5-ಹಂತದಲ್ಲಿ ಹೊಂದಾಣಿಕೆಯ ಮಾಡುವ 80 ಎಂಎಂ ಸಸ್ಪೆನ್ಷನ್ ಹೊಂದಿದೆ.

ಬ್ರೇಕ್ ಹಾಗೂ ಟೈರ್ ಗಳು:
ಜಾವಾ 42: ಮುಂದುಗಡೆ 90/90 ಅಳತೆಯ 18 ಇಂಚಿನ ಟೈರ್ ಹೊಂದಿದ್ದು, 280 ಎಂಎಂ ಡಿಸ್ಕ್ ಜೊತೆ ಸಿಂಗಲ್ ಚಾನೆಲ್ ಎಬಿಎಸ್ ಬ್ರೇಕ್ ಹೊಂದಿದೆ. ಹಿಂದುಗಡೆ 120/80 ಅಳತೆಯ 17 ಇಂಚಿನ ಟೈರ್ ಹೊಂದಿದ್ದು, 153 ಎಂಎಂ ಡ್ರಮ್ ಬ್ರೇಕ್ ಸಿಸ್ಟಮ್ ಹೊಂದಿದೆ.

ಕ್ಲಾಸಿಕ್ 350: ಮುಂದುಗಡೆ 90/90 ಅಳತೆಯ 19 ಇಂಚಿನ ಟೈರ್ ಹೊಂದಿದ್ದು, 280 ಎಂಎಂ ಡಿಸ್ಕ್ ಬ್ರೇಕ್ ಹೊಂದಿದ್ದು, ಹಿಂದುಗಡೆ 120/80 ಅಳತೆಯ 18 ಇಂಚಿನ ಟೈರ್ ಹೊಂದಿದ್ದು, 240 ಎಂಎಂ ಡಿಸ್ಕ್ ಬ್ರೇಕ್ ನೀಡಿದೆ.

ಸುತ್ತಳತೆ ಹಾಗೂ ತೂಕ:
ಜಾವಾ 42: 2122ಎಂಎಂ ಉದ್ದ, 789ಎಂಎಂ ಅಗಲ, 1165ಎಂಎಂ ಎತ್ತರ ಆಗಿದ್ದು, ವೀಲ್‍ಬೇಸ್ 1369ಎಂಎಂ ಇದೆ. ಒಟ್ಟು ಇಂಧನ ಸಾಮರ್ಥ್ಯ 14 ಲೀಟರ್ ಇದೆ. ಒಟ್ಟು ತೂಕ 170 ಕೆಜಿ ಹೊಂದಿದೆ. (ಗ್ರೌಂಡ್ ಕ್ಲಿಯರೆನ್ಸ್ ಮಾಹಿತಿ ನೀಡಿಲ್ಲ)

ಕ್ಲಾಸಿಕ್ 350: 2160ಎಂಎಂ ಉದ್ದ, 790ಎಂಎಂ ಅಗಲ, 1090ಎಂಎಂ ಎತ್ತರ ಆಗಿದ್ದು, ವೀಲ್‍ಬೇಸ್ 1370ಎಂಎಂ ಇದೆ. ಗ್ರೌಂಡ್ ಕ್ಲಿಯರೆನ್ಸ್ 135 ಎಂಎಂ ಆಗಿದೆ. ಇಂಧನ ಸಾಮರ್ಥ್ಯ 13.5 ಲೀಟರ್ ಆಗಿದ್ದು, ಒಟ್ಟು ತೂಕ 134 ಕೆಜಿಯಿದೆ,

ಬಣ್ಣ:
ಜಾವಾ 42: ನೆಬ್ಯುಲಾ ಬ್ಲೂ, ಕಾಮೆಟ್ ರೆಡ್, ಸ್ಟರ್ಲೈಟ್ ಬ್ಲೂ, ಲುಮೋಸ್ ಲೈಮ್, ಹ್ಯಾಲೆಸ್ ಟೀಲ್ ಹಾಗೂ ಗ್ಯಾಲಕ್ಟಿಕ್ ಗ್ರೀನ್ ಬಣ್ಣಗಳಲ್ಲಿ ಸಿಗುತ್ತದೆ.
ಕ್ಲಾಸಿಕ್ 350: ಲಗೂನ್, ಆಶ್ ಸಿಲ್ವರ್, ಚೆಸ್ಟ್ ನಟ್, ಬ್ಲಾಕ್, ರೆಡ್ಡಿಚ್ ರೆಡ್, ರೆಡ್ಡಿಚ್ ಗ್ರೀನ್, ರೆಡ್ಡಿಚ್ ಬ್ಲೂ ಹಾಗೂ ಗನ್‍ಮೆಟಲ್ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ.

ಬೆಲೆ:
ಜಾವಾ 42: ದೆಹಲಿ ಎಕ್ಸ್-ಶೋರೂಮಿನ ದರ 1.55 ಲಕ್ಷ ರೂಪಾಯಿಗಳು.
ಕ್ಲಾಸಿಕ್ 350: ದೆಹಲಿ ಎಕ್ಸ್-ಶೋರೂಮಿಗೆ 1.51 ಲಕ್ಷ ರೂಪಾಯಿಗಳು.

Comments are closed.