ಮನೋರಂಜನೆ

ದರ್ಶನ್, ಸುದೀಪ್, ಯಶ್, ಪುನೀತ್ ಅವರು ತಮ್ಮ ಸಿನೆಮಾಗಳಲ್ಲಿ ಹಿರಿಯ ನಾಯಕರಿಗೆ ಅವಕಾಶ ನೀಡಬೇಕು: ಜಗ್ಗೇಶ್

Pinterest LinkedIn Tumblr


ಬೆಂಗಳೂರು: ದರ್ಶನ್, ಸುದೀಪ್, ಪುನೀತ್, ಯಶ್ ಅವರು ತಮ್ಮ ಮುಂದಿನ ಸಿನಿಮಾಗಳಲ್ಲಿ ಹಿರಿಯ ನಾಯಕರಿಗೆ ಅವಕಾಶಗಳನ್ನ ನೀಡಬೇಕು ಎಂದು ನವರಸ ನಾಯಕ ಜಗ್ಗೇಶ್ ಅವರು ಮನವಿ ಮಾಡಿಕೊಂಡಿದ್ದಾರೆ.

8 ಎಂಎಂ ಬುಲೆಟ್ ಚಿತ್ರವೂ ಇಂದು ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿದ್ದು, ಚಿತ್ರದ ನಾಯಕ ಜಗ್ಗೇಶ್ ಪ್ರೇಕ್ಷರ ಜೊತೆ ಚಿತ್ರವನ್ನ ವೀಕ್ಷಿಸಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಕೊಂಡಿರುವ ನಟ ಜಗ್ಗೇಶ್ ಅವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಮತ್ತಷ್ಟು ವಿಭಿನ್ನ ಪಾತ್ರಗಳನ್ನ ಮುಂದೆಯೂ ಮಾಡುತ್ತೇನೆ ಎಂದು ಪಬ್ಲಿಕ್ ಟಿವಿಗೆ ತಿಳಿಸಿದರು.

ಕನ್ನಡ ಚಿತ್ರರಂಗವನ್ನ ದೊಡ್ಡ ಮಟ್ಟದಲ್ಲಿ ಕರೆದೊಯ್ಯುತ್ತಿರುವ ಯುವಪೀಳಿಗೆಗೆ ಸೇರಿದ ದರ್ಶನ್, ಯಶ್, ಸುದೀಪ್, ಪುನೀತ್ ಮುಂತಾದವರು ನಮ್ಮ ಸಿನಿಮಾ ರಂಗವನ್ನ ಬೆಳೆಸುತ್ತಿದ್ದಾರೆ. ಇಂತಹವರು ತಮ್ಮ ಸಿನಿಮಾಗಳಲ್ಲಿ ಹಿರಿಯ ನಟ-ನಟಿಯರಿಗೆ ಅವಕಾಶಗಳನ್ನ ನೀಡಬೇಕು ಎಂದು ಈ ವೇಳೆ ಮನವಿ ಮಾಡಿದರು.

ನಾನು 80, 90, 20, 21 ದಶಕದವರ ಜೊತೆ ನಟಿಸಿದ್ದು, ಎಲ್ಲಾ ಪೀಳಿಗೆಯವರ ಜೊತೆ ಕೆಲಸ ಮಾಡಿದ್ದು ಬಹಳ ಖುಷಿಯಾಗಿದೆ. ನಾನು ಎಷ್ಟೇ ವಿಭಿನ್ನ ಪಾತ್ರಗಳಲ್ಲಿ ಅಭಿಯಯಿಸಿದರೂ ಕಾಮಿಡಿಯನ್ನ ಮಾತ್ರ ಬಿಡುವುದಿಲ್ಲ ಎಂದು ಹೇಳಿದರು.

ಸದ್ಯಕ್ಕೆ ಶ್ರುತಿ ನಾಯ್ಡು ನಿರ್ದೇಶನದ ಪ್ರೀಮಿಯಂ ಪದ್ಮಿನಿ ಚಿತ್ರದಲ್ಲಿ ನಟಿಸುತ್ತಿರುವ ನಟ ಜಗ್ಗೇಶ್, ತೋತಾಪುರಿ ಎಂಬ ಚಿತ್ರದಲ್ಲೂ ನಟಿಸುತ್ತಿದ್ದಾರೆ.

Comments are closed.