ಕರ್ನಾಟಕ

ಚುನಾವಣೆಯೇ ಕೇಂದ್ರ ಸಚಿವ ಅನಂತ್ ಕುಮಾರ್ ಜೀವಕ್ಕೆ ಮುಳುವಾಯಿತಾ..?

Pinterest LinkedIn Tumblr

ಬೆಂಗಳೂರು: ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯೇ ಕೇಂದ್ರ ಸಚಿವ ಅನಂತ್ ಕುಮಾರ್ ಜೀವಕ್ಕೆ ಮುಳುವಾಯಿತಾ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಚುನಾವಣಾ ಕಾರಣಕ್ಕೆ ಚಿಕಿತ್ಸೆಯನ್ನು ಮುಂದೂಡಿದ್ದ ಅನಂತ್ ಕುಮಾರ್ ಅದಕ್ಕೆ ಇದೀಗ ತಮ್ಮ ಜೀವವನ್ನೇ ತೆರಬೇಕಾಯಿತು ಎಂದು ಹೇಳಲಾಗಿದೆ.

ಮೇ ತಿಂಗಳಿನಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿಯೇ ಕೆಮ್ಮಿನಿಂದ ಬಳಲುತ್ತಿದ್ದ ಅನಂತ್ ಕುಮಾರ್ ಚಿಕಿತ್ಸೆ ಪಡೆಯುವ ಬದಲು ಚುನಾವಣಾ ಪ್ರಚಾರದಲ್ಲಿ ಭಾಗಿಯಾದರು ಎಂದು ಅನಂತ್ ಕುಮಾರ್ ಅವರ ಸ್ನೇಹಿತ ಹಾಗೂ ಫ್ಯಾಮಿಲಿ ಡಾಕ್ಟರ್ ಬಿ.ಎಸ್. ಶ್ರೀನಾಥ್ ಹೇಳಿದ್ದಾರೆ.

ನಂತರ ಜಯನಗರ ಬಿಜೆಪಿ ಅಭ್ಯರ್ಥಿ ನಿಧನದಿಂದ ಮತದಾನ ಮುಂದೂಡಿಕೆಯಾದಂತೆ ಅನಂತ್ ಕುಮಾರ್ ಚಿಕಿತ್ಸೆಯೂ ಮುಂದೂಡಿಕೆಯಾಯಿತು. ಚುನಾವಣೆ ಬಳಿಕವೇ ಚಿಕಿತ್ಸೆಗೆ ತೆರಳಿದರು. ಅಷ್ಟರಲ್ಲಾಗಲೇ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿತ್ತು, ಆದರೆ ಅನಂತ್ ಕುಮಾರ್ ಅವರಿಗೆ ಇದರ ಬಗ್ಗೆ ಅರಿವಿರಿಲಿಲ್ಲ.

ಡಯಾಬಿಟಿಸ್ ಹೊರತು ಪಡಸಿದರೇ ಅವರಿಗೆ ಯಾವುದೇ ರೀತಿಯ ಕೆಟ್ಟ ಚಟಗಳಿರಲಿಲ್ಲ, ಹೀಗಿದ್ದರೂ ಅನಂತ್ ಕುಮಾರ್ ಅವರಿಗೆ ಶ್ವಾಶಕೋಶ ಕ್ಯಾನ್ಸರ್ ಆಗಿ ಬೆಳೆದಿತ್ತು. ಹೀಗಾಗಿ ಅನಂತ್ ಕುಮಾರ್ ಅವರ ಕುಟುಂಬಸ್ಥರು ಅವರನ್ನ ಚಿಕಿತ್ಸೆಗಾಗಿ ನ್ಯೂಯಾರ್ಕ್ ಗೆ ತೆರಳಿದರು, ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ, ಹೀಗಾಗಿ ಕುಟುಂಬಸ್ಥರು ವಾಪಸ್ ಬೆಂಗಳೂರಿಗೆ ಕರೆ ತಂದರು. ನಂತರ ನಗರದ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

15 ದಿನಗಳ ಕಾಲ ಚಿಕಿತ್ಸೆ ಪಡೆಯುವಂತೆ ವೈದ್ಯರು ನೀಡಿದ ಸಲಹೆಯಂತೆ ಅಲ್ಲಿಯೇ ದಾಖಲಿಸಿ‌ ಚಿಕಿತ್ಸೆ ಕೊಡಿಸಲಾಗಿತ್ತು. ನವೆಂಬರ್ 1 ರಂದು ಅನಂತ್ ಕುಮಾರ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಬೇಕಿತ್ತು. ಆದರೆ ಆರೋಗ್ಯದಲ್ಲಿ ಇನ್ನೂ‌ ಸುಧಾರಣೆ ಆಗಬೇಕಾದ ಕಾರಣ ಶಂಕರ ಆಸ್ಪತ್ರೆ ವೈದ್ಯರು ಮತ್ತೆ 10 ದಿನ ಚಿಕಿತ್ಸೆ ಮುಂದುವರೆಸಲು ನಿರ್ಧರಿಸಿದ್ದರು. ಈ ಸಂಬಂಧ ಲಂಡನ್ ವೈದ್ಯರೊಂದಿಗೆ ಸಮಾಲೋಚನೆ ‌ನಡೆಸಿ‌ ಚಿಕಿತ್ಸೆ ನೀಡಿದ್ದರು ಎಂದು ಡಾ.ಶಂಕರ್ ತಿಳಿಸಿದ್ದಾರೆ.

Comments are closed.