ಕರಾವಳಿ

ಮನೆಯಲ್ಲಿ ಕಾಲುಮೆಣಸು ಇದ್ದರೆ ಸಾಕು ಈ ನೋವು ಮಾಯ ..?

Pinterest LinkedIn Tumblr

ಇದ್ದಕ್ಕಿದ್ದ ಹಾಗೆ ಹಲ್ಲು ನೋವು ಕಾಣಿಸಿಕೊಂಡರೆ ಕಾಳುಮೆಣಸು ಮತ್ತು ಉಪ್ಪನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡು ನೀರಿನ ಹನಿ ಹಾಕಿ ಪೇಸ್ಟ್ ಮ್ಮಡಿ. ಈ ಮಿಶ್ರಣವನ್ನು ನೋವಿರುವ ಹಲ್ಲಿಗೆ ಹಚ್ಚಿ ಕೆಲವು ನಿಮಿಷಗಳ ಕಾಲ ಬಿಡಿ.ನಂತರ ತೊಳೆಯಿರಿ.

ಹೀಗೆ ಪ್ರತಿದಿನವೂ ಮಾಡುತ್ತಾ ಬಂದರೆ ಹಲ್ಲಿನ ನೋವು ನಿವಾರಣೆಯಾಗುವುದಲ್ಲದೆ, ಹಲ್ಲು ಕೂಡ ಹುಳುಕಾಗುವುದನ್ನು ತಪ್ಪಿಸಬಹುದು. ಕಾಳುಮೆಣಸು ಮತ್ತು ಉಪ್ಪಿನ ಮಿಶ್ರಣ ಹಲ್ಲಿಗೆ ಹಚ್ಚುವುದರಿಂದ ಬಾಯಿಯ ದುರ್ವಾಸನೆಯೂ ಕಡಿಮೆಯಾಗುತ್ತಾ ಬರುತ್ತದೆ.

ಕಾಲುಮೆಣಸನ್ನು ಜಾಸ್ತಿಯಾಗಿ ತಿಂದರೂ ಬಾಯಿ ಸುಟ್ಟು ಹೋಗುತ್ತದೆ.ಆದ್ದರಿಂದ ಅದರ ರಸವು ಚರ್ಮಕ್ಕೆ ತಾಗದಂತೆ ಹಲ್ಲಿಗೆ ಬಿಟ್ಟುಕೊಳ್ಳುವುದನ್ನು ಮರೆಯದಿರಿ.ಚಂಡು ಹೂವಿನ ಗಿಡದ ಎಲೆಗಳನ್ನು ನೀರಿಗೆ ಹಾಕಿ ಕಷಾಯ ಮಾಡಿ ಪ್ರತಿದಿನ ಬಾಯಿ ಮುಕ್ಕಳಿಸಿದರೆ ಹಲ್ಲು ನೋವು ನಿವಾರಣೆಯಾಗುತ್ತದೆ.

ಪಪ್ಪಾಯದ ಎಲೆ ಹಾಗೂ ತೊಗಟೆ ಕಷಾಯವನ್ನು ಉಪಯೋಗಿಸಿದರೆ ಹಲ್ಲು ನೋವು ಕಡಿಮೆಯಾಗುತ್ತದೆ.ಎಳ್ಳೆಣ್ಣೆಯಿಂದ ಪ್ರತಿದಿನ ಬೆಳಗ್ಗೆ ಬಾಯಿ ಮುಕ್ಕಳಿಸಿದರೆ ವಸಡು ಗಟ್ಟಿಯಾಗುತ್ತದೆ ಹಾಗೂ ಹಲ್ಲು ನೋವು ಬರುವುದಿಲ್ಲ. ನುಗ್ಗೆ ಮರದ ಅಂಟನ್ನು ಬಾಯಲ್ಲಿ ಇಟ್ಟುಕೊಂಡರೆ ಹಲ್ಲು ನೋವು ಬರುವುದಿಲ್ಲ.

ತುಳಸಿ ಎಲೆ ಮತ್ತು ಕರಿಮೆಣಸನ್ನು ರುಬ್ಬಿ ಮಾತ್ರೆಗಳನ್ನು ಮಾಡಿಕೊಂಡು ಹಲ್ಲಿನ ನಡುವೆ ಇಟ್ಟುಕೊಂಡರೆ ಹಲ್ಲು ನೋವು ನಿವಾರಣೆಯಾಗುತ್ತದೆ.ಬೆಳ್ಳುಳ್ಳಿ ಮತ್ತು ಸೈಂಧವ ಉಪ್ಪನ್ನು ಬೆರೆಸಿ ನೋವಿರುವ ಹಲ್ಲಿನ ಮೇಲೆ ಇಟ್ಟುಕೊಂಡರೆ ಹಲ್ಲು ನೋವು ಕಡಿಮೆಯಾಗುತ್ತದೆ.

Comments are closed.