ಕರ್ನಾಟಕ

ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು….ಇಬ್ಬರು ಕುಖ್ಯಾತ ದರೋಡೆಕೋರರಿಬ್ಬರ ಮೇಲೆ ಪೋಲೀಸ್ ಫೈರಿಂಗ್

Pinterest LinkedIn Tumblr

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಭಾನುವಾರ ನಸುಕಿನ ಜಾವ ಇಬ್ಬರು ಕುಖ್ಯಾತ ದರೋಡೆಕೋರರಿಬ್ಬರ ಮೇಲೆ ಫೈರಿಂಗ್ ನಡೆಸಿದ್ದಾರೆ.

ಬೆಂಗಳೂರಿನ ಕಾಡುಗೋಡಿ ಠಾಣೆ ವ್ಯಾಪ್ತಿಯ ಕಾಗೆ ಸೊಣ್ಣೇನಹಳ್ಳಿಯಲ್ಲಿ ಫೈರಿಂಗ್ ನಡೆಸಿದ್ದು ಅಪ್ಪು ಅಲಿಯಾಸ್ ನವೀನ್, ಗಿರಿ ಅಲಿಯಾಸ್ ಗಿರೀಶ್ ನನ್ನು ಬಂಧಿಸಲಾಗಿದೆ.

ಘಟನೆ ವಿವರ
ನವೀನ್, ಗಿರೀಶ್ ಸೇರಿ ದರೋಡೆಕೋರರ ತಂಡ ಮಧ್ಯರಾತ್ರಿ ಒಂಟಿಯಾಗಿರುವ ಚಾಲಕರು, ದ್ವಿಚಕ್ರ ವಾಹನ ಸವಾರರನ್ನು ಬೆದರಿಸಿ ಹಣ, ಚಿನ್ನಗಳನ್ನು ದೋಚುತ್ತಿದ್ದರು.ಅಲ್ಲದೆ ನವೀನ್ ಕೆಆರ್ ಪುರಂ ಮಾಜಿ ಕಾರ್[ಪೋರೇಟರ್ ಪತಿ ಸಿರ್‍ಪುರ ಶ್ರೀನಿವಾಸ್ ಎನ್ನುವವರ ಕೊಲೆ ಆರೋಪಿಯೂ ಹೌದು.

ಈ ಆರೋಪಿಗಳಿಗಾಗಿ ಹಲವು ದಿನಗಳಿಂದ ಬಲೆ ಬೀಸಿದ್ದ ಕೆಆರ್ ಪುರಂ ಇನ್ಸ್ ಪೆಕ್ಟರ್ ಜಯರಾಜ್ ಅವರ ನೇತೃತ್ವದ ತಂಡ ಮೊನ್ನೆ ಸಹ ಘಟನಾ ಸ್ಥಳಕ್ಕೆ ಆಗಮಿಸಿದಾಗ ನವೀನ್, ಗಿರೀಶ್ ಇಬ್ಬರೂ ಪೋಲೀಸ್ ಜೀಪಿಗೆ ಕಲ್ಲು ತೂರಿದ್ದಾರೆ.ಅಲ್ಲದೆ ಪೋಲೀಸರ ಮೇಲೆಯ್ ಗುಂಡು ಹಾರಿಸಿ, ಡ್ರಾಗನ್‍ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಕಲ್ಲು ತಾಗಿ ಪೇದೆ ಮುನಿರಾಜು ಎಂಬವವರಿಗೆ ಗಾಯಗಳಾಗಿದೆ.

ಆಗ ಪೋಲೀಸರು ಆರೋಪಿಗಳ ಬಂಧನಕ್ಕೆ ಮುಂದಾಗಿ ಇಬ್ಬರ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಇದೀಗ ಆರೋಪಿಗಳಿಗೆ ಕಾಡುಗೋಡಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ ಎಂದು ಮಾಹಿತಿ ತಿಳಿಸಿದೆ.

Comments are closed.