ಕರ್ನಾಟಕ

ಗಲ್ಲಿಗೇರಿಸುವಂತೆ ಮೋದಿಯೇ ಹೇಳಿದ್ದು; ಜಯಚಂದ್ರ

Pinterest LinkedIn Tumblr


ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನನಗೆ ಅಪಾ ಗೌರವವಿದೆ. ನಾನು ನಿನ್ನೆ ತುಮಕೂರಿನಲ್ಲಿ ನೀಡಿದ ಹೇಳಿಕೆ ಬಗ್ಗೆ ಯಾರೂ ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಸ್ಪಷ್ಟನೆ ನೀಡಿದ್ದಾರೆ.

ನೋಟು ನಿಷೇಧ ಖಂಡಿಸಿ ತುಮಕೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಅವರು, ನೋಟು ನಿಷೇಧದ ಬಳಿಕ ಪ್ರಧಾನಿ ಮೋದಿ, ‘ನನಗೆ 50 ದಿನ ಕಾಲಾವಕಾಶ ಕೊಡಿ, ಇದರಲ್ಲಿ ಗೆದ್ದು ಬರುತ್ತೇನೆ. ಒಂದು ವೇಳೆ ಬರದಿದ್ದರೆ ನನ್ನನ್ನು ಜೀವಂತವಾಗಿ ಸುಡಿ, ಸಾರ್ವಜನಿಕವಾಗಿ ಗಲ್ಲಿಗೇರಿಸಿ’ ಎಂದು ಪ್ರಧಾನಿ ಮೋದಿಯವರೇ ಹೇಳಿದ್ದರು. ಅವರ ಮಾತಿನಂತೆ ಬಹುಶಃ ಜೀವಂತವಾಗಿ ಸುಡುವ ಕಾಲ ಇಂದು ಬಂದಿದೆ ಎಂದು ಟಿ.ಬಿ. ಜಯಚಂದ್ರ ಕಿಡಿಕಾರಿದ್ದರು.

ಈ ಬಗ್ಗೆ ಇಂದು ಟಿ.ಬಿ.ಜಯಚಂದ್ರ ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದ್ದಾರೆ. ನೋಟು ಅಮಾನ್ಯೀಕರಣವಾಗಿ ಎರಡು ವರ್ಷ ಕಳೆದಿವೆ. ಆದರೂ ಸಹ ದೇಶದಲ್ಲಿ ಶೇ. 99.3 ನಗದು ಆರ್​ಬಿಐ ಖಾತೆಯಲ್ಲಿ ಜಮಾ ಆಗಿದೆ. ಆದರೆ ಸಾಮಾನ್ಯ ಜನರ ಖಾತೆಗೆ 10-15 ಲಕ್ಷ ರೂಗಳು ಜಮಾ ಆಗಿಲ್ಲ. ಬದಲಾಗಿ ಮಧ್ಯಮ ಹಾಗೂ ತಳಮಟ್ಟದ ಜನರಿಗೆ, ಪ್ರಮುಖವಾಗಿ ರೈತರಿಗೂ ಸಹ ನೋಟು ಅಮಾನ್ಯೀಕರಣದಿಂದ ಸಾಕಷ್ಟು ತೊಂದರೆಯಾಗಿದೆ. ಜನರ ನೋವನ್ನು ನಾನು ನಿನ್ನೆ ತುಮಕೂರಿನಲ್ಲಿ ಮಾಧ್ಯಮಗಳ ಜೊತೆ ಹೇಳಿದೆ. ಬದಲಾಗಿ ನನ್ನ ಉದ್ದೇಶ ಯಾರಿಗೂ ನೋವು ಉಂಟು ಮಾಡುವ ದುರುದ್ದೇಶವಿರುವುದಿಲ್ಲ. ಈ ಬಗ್ಗೆ ಯಾರೂ ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ.

ಜತೆಗೆ ಜಯಚಂದ್ರ ಅವರು ಸ್ಪಷ್ಟೀಕರಣದ ಜತೆ ನರೇಂದ್ರ ಮೋದಿಯವರು ನೋಟು ನಿಷೇಧ ಸಂದರ್ಭದಲ್ಲಿ ಮಾತನಾಡಿದ್ದಕ್ಕೆ ಪತ್ರಿಕಾ ವರದಿಯನ್ನೂ ಅಂಟಿಸಿದ್ದಾರೆ. ದಿನ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ನರೇಂದ್ರ ಮೋದಿ ಭಾಷಣದ ವರದಿ ಸ್ಪಷ್ಟೀಕರಣದ ಜತೆ ನೀಡಿದ್ದಾರೆ.

Comments are closed.