ರಾಷ್ಟ್ರೀಯ

ಚುನಾವಣೋತ್ತರ ಸಮೀಕ್ಷೆಗೆ ಆಯೋಗ ನಿಷೇಧ..!

Pinterest LinkedIn Tumblr


ದೆಹಲಿ: ಮುಂಬರುವ ದಿನಗಳಲ್ಲಿ ನಡೆಯಲಿರುವ ಪಂಚರಾಜ್ಯ ವಿಧಾನಸಭೆ ಚುನಾವಣೆ ವೇಳೆ ಚುನಾವಣೋತ್ತರ ಸಮೀಕ್ಷೆಗೆ ಆಯೋಗ ನಿಷೇಧ ಹೇರಿದೆ.

ನವೆಂಬರ್ 12ರಿಂದ ಡಿಸೆಂಬರ್ 7ವರೆಗೂ ಛತ್ತೀಸ್‌ಗಡ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಮತದಾನ ನಂತರ ಯಾವುದೇ ರೀತಿಯ ಸಮೀಕ್ಷೆ ಪ್ರಕಟಿಸಬಾರದು ಎಂದು ಕೇಂದ್ರ ಚುನಾವಣಾ ಆಯೋಗ ನಿಷೇಧ ಹೇರಿದೆ.

ಛತ್ತೀಸ್‌ಗಢದಲ್ಲಿ ಮೊದಲ ಹಂತದ ಮತದಾನಕ್ಕೆೆ ಒಂದು ದಿನ ಬಾಕಿ ಇರುವಾಗ ಚುನಾವಣಾ ಆಯೋಗ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಮತದಾನೋತ್ತರ ಸಮೀಕ್ಷೆಗಳಿಗೆ ಆಯೋಗ ಸುಮಾರು ಒಂದು ತಿಂಗಳ ನಿಷೇಧ ಹೇರಿದ್ದು, ಚುನಾವಣಾ ಸಮಿತಿ ಶಿಫಾರಸ್ಸಿನಂತೆ ಈ ನಿರ್ಧಾರ ಎಂದು ಆಯೋಗದ ಮೂಲಗಳು ತಿಳಿಸಿವೆ. ಯಾವುದೇ ರೀತಿಯ ಸಮೀಕ್ಷೆಗಳನ್ನು ಮುದ್ರಣ ಹಾಗೂ ವಿದ್ಯುನ್ಮಾಾನ ಮಾಧ್ಯಮಗಳಲ್ಲಿ ಪ್ರಕಟಿಸುವಂತಿಲ್ಲ ಎಂದು ಆಯೋಗ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

Comments are closed.