ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಡುಪಿ ಜಿಲ್ಲಾಧಿಕಾರಿ, ಒಂದಷ್ಟು ಮಂದಿ ವಿವಿಧ ಇಲಾಖಾಧಿಕಾರಿಗಳು ಹೊರತು ಪಡಿಸಿದರೆ ಯಾರೊಬ್ಬ ಜನಪ್ರತಿನಿಧಿ ಭಾಗಿಯಾಗಿಲ್ಲ.
ಸ.ಪ್ರ.ದ ಕಾಲೇಜು ತೆಂಕನಿಡಿಯೂರಿನ ಸಹ ಪ್ರಾದ್ಯಾಪಕ ಡಾ. ಜಯಪ್ರಕಾಶ್ ಶೆಟ್ಟಿ ಟಿಪ್ಪು ಸುಲ್ತಾನ್ ನ ವ್ಯಕ್ತಿತ್ವ ಮತ್ತು ಸಾಧನೆ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ, ಟಿಪ್ಪು ಸುಲ್ತಾನ್ ಅವರನ್ನು ಒಂದು ಪ್ರಭುತ್ವದ ರಾಜನನ್ನಾಗಿ ನೋಡದೆ, ವಸಾಹತು ಶಾಹಿ ವಿರುದ್ದ ಹೋರಾಟಕ್ಕೆ ಸ್ಪೂರ್ತಿಯಾಗಿದ್ದರು, ಎಂಬುದರ ಮೂಲಕ ನೆನಪಿಸಿಕೊಳ್ಳಬೇಕು. ಇತಿಹಾಸದಲ್ಲಿ ತಮ್ಮ ಪ್ರಭುತ್ವವನ್ನು ಉಳಿಸಿಕೊಳ್ಳಲು ಎಲ್ಲಾ ರಾಜರೂ ಯುದ್ದಗಳನ್ನು ಮಾಡಿದ್ದಾರೆ, ಪ್ರಭುತ್ವಕ್ಕಾಗಿ ನಡೆದ ಯುದ್ದದಲ್ಲಿನ ಹಿಂಸೆಯನ್ನು ಎಲ್ಲಾ ಜನರೂ ಅನುಭವಿಸಿದ್ದಾರೆ, ಟಿಪ್ಪು ವಸಾಹತು ಶಾಹಿ ವಿರುದ್ದ ಹೋರಾಡಿದ ಧೀರ ವ್ಯಕ್ತಿ ಆತನನ್ನು ಯಾವುದೇ ಧಾರ್ಮಿಕ ಹಿನ್ನಲೆಯಿಂದ ಗುರುತಿಸದೇ ಒಬ್ಬ ಮನುಷ್ಯನನ್ನಾಗಿ ಕಾಣಬೇಕು ಎಂದು ಡಾ.ಜಯಪ್ರಕಾಶ್ ಶೆಟ್ಟಿ ಹೇಳಿದರು.
ಟಿಪ್ಪುವಿನ ಆಡಳಿತಾವಧಿಯಲ್ಲಿ ಅತನ ಮಂತ್ರಿಮಂಡಲ ಮತ್ತು ಸೈನ್ಯದಲ್ಲಿ ಎಲ್ಲಾ ಧರ್ಮಿಯರೂ ಪ್ರಮುಖ ಹುದ್ದೆಗಳನ್ನು ಹೊಂದಿದ್ದರು, ಮೂಡನಂಬಿಕೆಗಳ ವಿರೋಧಿಯಾಗಿದ್ದ ಟಿಪ್ಪು ಅನೇಕ ಸುಧಾರಣ ಕ್ರಮಗಳನ್ನು ಜಾರಿಗೆ ತಂದಿದ್ದರು, ವಾಣಿಜ್ಯ ಬೆಳಗೆ ಹೆಚ್ಚಿನ ಆದ್ಯತೆ ನೀಡಿದ್ದು,ರೇಷ್ಮೆ ಬೆಳೆಯನ್ನು ಪರಿಚಯಿಸಿದ ಕೀರ್ತಿ ಟಿಪ್ಪುಗೆ ಸಲ್ಲಬೇಕು, ಈತನ ಅವಧಿಯಲ್ಲಿ ಮೈಸೂರು ಭಾಗದ ಶೇ.60 ರಷ್ಟು ಭೂಮಿ ನೀರಾವರಿ ವಲಯವಾಗಿ ಮಾರ್ಪಟ್ಟಿತ್ತು, ಭೂ ಒಡೆತನ ಮತ್ತು ಮರುಹಂಚಕೆಯ ಸಂದರ್ಭದಲ್ಲಿ ಟಿಪ್ಪು ತಂದ ಸುಧಾರಣೆಗಳನ್ನು ನೆನಪಿಸಿಕೊಳ್ಳಭೇಕು, ಟಿಪ್ಪುವಿನ ಕುರಿತು ಜನ ಸಾಮಾನ್ಯರಿಂದ ರಚಿತವಾಗಿರುವ ಲಾವಣಿಗಳು ಆತನ ಸಾಧನೆ ಕುರಿತು ಮಾಹಿತಿ ನೀಡುತ್ತವೆ, ಟಿಪ್ಪುವನ್ನು ನಿರ್ಧಿಷ್ಟ ಮತಪಂಥಕ್ಕೆ ಸೇರಿದ ರಾಜನ್ನಾಗಿ ನೋಡದೇ ವಸಾಹತು ಶಾಹಿ ವಿರುದ್ದ ಹೋರಾಡಿ, ವಂಚನೆಗೆ ಒಳಗಾಗಿ ದುರಂತಕ್ಕೆ ಗುರಿಯಾದವನೆಂಬ ಸಹಾನುಭೂತಿಯಿಂದ ನೋಡಬೇಕಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬ ನಿಂಬರಗಿ, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ , ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ , ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಪಿ. ಇಬ್ರಾಹಿಂ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಸ್ವಾಗತಿಸಿದರು, ತಾಂತ್ರಿಕ ಮೇಲ್ವಿಚಾರಲಿ ಪೂರ್ಣಿಮಾ ನಿರೂಪಿಸಿ ವಂದಿಸಿದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಗರಿಷ್ಠ ಅಂಕ ಪಡೆದ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಟಿಪ್ಪು ಕುರಿತು ಗಾಯನ ಮತ್ತು ಧಫ್ ಕಾರ್ಯಕ್ರಮ ನಡೆಯಿತು.
Comments are closed.