ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಸೊಸೆ ಸ್ಮಿತಾ ರಾಕೇಶ್ ಪಾಲುದಾರಿಕೆಯ ಪಬ್ ಮೇಲೆ ಸಿಸಿಬಿ ಹಾಗೂ ಅಬಕಾರಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ನಗರದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ಪ್ರತಿಷ್ಟಿತ ‘ಲಿ ಮೆರಿಡಿಯನ್’ ಹೋಟೆಲ್ ನಲ್ಲಿ ಸ್ಮಿತಾ ರಾಕೇಶ್ ‘ಶುಗರ್ ಫ್ಯಾಕ್ಟರಿ’ ಎಂಬ ಹೆಸರಿನಲ್ಲಿ ಸ್ಮಿತಾ ಪಬ್ ನಡೆಸುತ್ತಿದ್ದರು. ರಾಕೇಶ್ ಸಿದ್ದರಾಮಯ್ಯ ಸ್ನೇಹಿತ ರೋಹನ್ ಗೌಡ ಸಹ ಈ ಪಬ್ನ ಪಾಲುದಾರರು. ಈ ಪಬ್ ಅಬಕಾರಿ ಕಾಯ್ದೆಯನ್ನು ಸರಿಯಾಗಿ ಪಾಲಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ನಿಯಮದ ಪ್ರಕಾರ ರಾತ್ರಿ 1 ಗಂಟೆಗೆ ಪಬ್ ಬಂದ್ ಮಾಡಬೇಕು. ಆದ್ರೆ ರಾತ್ರಿ 3 ಗಂಟೆವರೆಗೂ ಪಬ್ ತೆರೆದಿರುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಪಬ್ ಬಂದ್ ಮಾಡಿಸಿದ್ದಾರೆ.
ಕಳೆದ ಶನಿವಾರ ಸಿಸಿಬಿ, ಅಬಕಾರಿ ಅಧಿಕಾರಿಗಳು ದಾಳಿ ನಡೆಸಲಾಗಿದ್ದು, ನಿಯಮಗಳ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಶುಗರ್ ಫ್ಯಾಕ್ಟರಿ ಪಬ್ ಅನ್ನು ಮುಚ್ಚಿಸಲಾಗಿದೆ. ಈ ಕುರಿತು 10 ದಿನದೊಳಗೆ ವಿವರಣೆ ನೀಡುವಂತೆ ಮಾಲೀಕರಿಗೆ ನೋಟೀಸ್ ನೀಡಲಾಗಿದೆ, ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಒಂದಂಕಿ ಲಾಟರಿ ಪ್ರಕರಣದಲ್ಲಿ ಹೆಸರು ಥಳಕುಹಾಕಿಕೊಂಡ ಹಿನ್ನಲೆಯಲ್ಲಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ರನ್ನು ಅಮಾನತ್ತು ಮಾಡಲಾಗಿತ್ತು. ಈಗ ಅಲೋಕ್ ಕುಮಾರ್ ಸಿಸಿಬಿ ಹೆಚ್ಚುವರಿ ಆಯುಕ್ತರಾಗಿದ್ದು, ಹಲವು ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಅಧಿಕಾರಿಗಳ ವಲಯದಲ್ಲಿ ಚರ್ಚೆಯೂ ಆರಂಭವಾಗಿದೆ.
Comments are closed.