ಕರಾವಳಿ

ಮಕ್ಕಳಲ್ಲಿ ಅತಿ ಹೆಚ್ಚು ಜೊಲ್ಲು ಸುರಿಸುವ ಸಮಸ್ಯೆ ನಿವಾರಣೆಗೆ ಮನೆಮದ್ದು

Pinterest LinkedIn Tumblr

ಸಾಮಾನ್ಯವಾಗಿ ಕೆಲವು ಮಕ್ಕಳಲ್ಲಿ ಜೊಲ್ಲು ಸುರಿಸುವ ಸಮಸ್ಯೆ ಇರುತ್ತದೆ , ಅಂತಹ ಸಮಸ್ಯೆಗೆ ಮನೆಯಲ್ಲಿಯೆ ಇದೆ ಔಷಧಿ. ಹೌದು ಮನೆಯಲ್ಲಿಯೇ ಸ್ವತಃ ತಾವೇ ಮನೆಮದ್ದು ತಯಾರಿಸಿಕೊಳ್ಳಬಹುದು ಅದು ಹೇಗೆ ಅನ್ನೋದನ್ನ ತಿಳಿಸುತ್ತೇವೆ ನೋಡಿ..

ಸುಲಭವಾಗಿ ಮನೆಮದ್ದು ತಯಾರಿಸಿ ಸಮಸ್ಯೆಗೆ ನೈಸರ್ಗಿಕವಾದ ಪರಿಹಾರವನ್ನು ಪಡೆಯಬಹುದಾಗಿದೆ. ಅಡುಗೆಗೆ ಬಳಸುವ ಚಕ್ಕೆ ಪುಡಿಯನ್ನು ನೀರಿನಲ್ಲಿ ಬೆರೆಸಿ ಕಷಾಯ ಮಾಡಿ ಬಾಯಿ ಮುಕ್ಕಳಿಸುವುದರಿಂದ ಜೊಲ್ಲು ಸುರಿಸುವ ಸಮಸ್ಯೆ ನಿವಾರಣೆಯಾಗುತ್ತದೆ.

ಒಂದು ತುಂಡು ನಿಂಬೆಹಣ್ಣನ್ನು ಕತ್ತರಿಸಿ ಬಾಯಲ್ಲಿ ಇಟ್ಟುಕೊಂಡರೆ ಜೊಲ್ಲು ಸಮಸ್ಯೆ ನಿವಾರಣೆಯಾಗುತ್ತದೆ.ಅಷ್ಟೇ ಅಲ್ಲದೆ ಎರಡು ಮೂರು ಲವಂಗವನ್ನು ಬಾಯಲ್ಲಿ ಹಾಕಿಕೊಂಡು ಅಗಿದೆ ಜೊಲ್ಲು ಬರುವುದು ನಿಲ್ಲುತ್ತದೆ.

ಊಟದ ನಂತರ ಒಂದು ಗ್ಲಾಸ್ ಬಿಸಿನೀರಿನಲ್ಲಿ ಬೆಟ್ಟದ ನೆಲ್ಲಿಕಾಯಿ ಹುಡಿಯನ್ನು ಹಾಕಿ ಸ್ಪಲ್ಪ ಹರಿಶಿನ ಹುಡಿ ಬೆರೆಸಿ ಕುಡಿದರೆ ಜೊಲ್ಲು ನಿಲ್ಲುತ್ತದೆ.

Comments are closed.