ಕರ್ನಾಟಕ

ರೈತರ ಸಾಲ ವಸೂಲಾಗದ್ದಕ್ಕೆ ಶಾಖೆ ಮುಚ್ಚಲು ಮುಂದಾದ ಎಸ್‍ಬಿಐ!

Pinterest LinkedIn Tumblr


ತುಮಕೂರು: ರೈತರ ಸಾಲ ವಸೂಲಾಗದ ಕಾರಣ ಜಿಲ್ಲೆಯ ಪಾವಗಡ ತಾಲೂಕಿನ ಅರಿಸಿಕೆರೆಯ ಶಾಖೆಯನ್ನು ಮುಚ್ಚಲು ಸ್ಟೇಟ್ ಬ್ಯಾಂಕ್ ಇಂಡಿಯಾ ಮುಂದಾಗಿದೆ.

ಹೌದು, ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿ, ಋಣಮುಕ್ತ ಪತ್ರವನ್ನು ರೈತರ ಮನೆಬಾಗಿಲಿಗೆ ಕಳುಹಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ರಾಜ್ಯದ ಕೆಲವು ಬ್ಯಾಂಕುಗಳು ರೈತರಿಂದ ಸಾಲ ವಸೂಲಿಯಾಗದೇ ಇರುವ ಕಾರಣಕ್ಕೆ ಬ್ಯಾಂಕ್ ಶಾಖೆಗಳನ್ನೇ ಮುಚ್ಚಲು ಮುಂದಾಗುತ್ತಿವೆ.

ಪಾವಗಡ ತಾಲೂಕಿನ ಅರಿಸಿಕೆರೆಯ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯನ್ನು ಮುಚ್ಚಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಶಾಖೆಯಲ್ಲಿ ಸುಮಾರು 2 ಕೋಟಿ ರೂಪಾಯಿ ಸಾಲವನ್ನು ರೈತರಿಗೆ ನೀಡಿದ್ದು, ಇದೂವರೆಗೂ ರೈತರಿಂದ ಸಾಲ ವಸೂಲಿ ಆಗಿಲ್ಲ. ಹೀಗಾಗಿ ಬ್ಯಾಂಕ್ ನಷ್ಟದಲ್ಲಿದೆ ಎಂದು ವರದಿ ನೀಡಿ ಬಂದ್ ಮಾಡಲು ನಿರ್ಧರಿಸಿದ್ದಾರೆ.

ಬ್ಯಾಂಕ್ ಮುಚ್ಚುವ ಅಧಿಕಾರಿಗಳ ನಿರ್ಧಾರಕ್ಕೆ, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಆವರಣದಲ್ಲಿ ಶಾಖೆ ಮುಚ್ಚದಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲೇ ಈ ಬ್ಯಾಂಕಿನಲ್ಲಿ ವಾರ್ಷಿಕ 17 ಕೋಟಿ ರೂ. ವಹಿವಾಟು ನಡೆಯುತ್ತಿದೂ, ಆದರೂ ಅಧಿಕಾರಿಗಳು ಬ್ಯಾಂಕ್ ಮುಚ್ಚಲು ಮುಂದಾಗುತ್ತಿದ್ದಾರೆ. ಅಲ್ಲದೇ ವಾರ್ಷಿಕ ಕೇವಲ 6 ಕೋಟಿ ರೂ. ವ್ಯವಹಾರ ನಡೆಯುವ ಮಂಗಳವಾಡಾ ಶಾಖೆಗೆ ವಿಲೀನಗೊಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Comments are closed.