ಕರ್ನಾಟಕ

ಮುತ್ತು ಕೊಡು.. ನಾನು ಕರೆದಲ್ಲಿಗೆ ಬಾ: ಯುವತಿಯಿಂದ ಸರಕಾರಿ ನೌಕರನ ವಿರುದ್ಧ ಮೀಟೂ ಆರೋಪ

Pinterest LinkedIn Tumblr


ಹಾಸನ: ಸಿನಿಮಾ ನಟಿಯರು ಮೀಟೂ ಅಭಿಯಾನಕ್ಕೆ ಕೈ ಜೋಡಿಸಿದ ನಂತರ ಇದೀಗ ಸಾರ್ವಜನಿಕ ವಲಯದಲ್ಲಿಯೂ ವಂಚನೆಗೊಳಗಾಗಿರುವ ಯುವತಿಯರು ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

ಹಾಸನದ ಯುವತಿಯೊಬ್ಬಳು ಮೀಟೂ ಅಭಿಯಾನಕ್ಕೆ ಕೈ ಜೋಡಿಸಿ, ತನಗಾದ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಳೆ. ತನ್ನ ಹೆಸರು ಹೇಳದ ಯುವತಿ, ಹಾಸನದ ಸರ್ಕಾರಿ ನೌಕರ ಕೃಷ್ಣೇಗೌಡ ಎಂಬವರ ಮೇಲೆ ಮೀಟೂ ಆರೋಪ ಮಾಡಿದ್ದಾಳೆ.

ಕೃಷ್ಣೇಗೌಡ ಕೆಲಸ ಕೊಡಿಸುವ ನೆಪದಲ್ಲಿ ನನ್ನ ಮೊಬೈಲ್ ನಂಬರ್ ಪಡೆದು ಲೈಂಗಿಕ ಕಿರುಕುಳ ನೀಡುತ್ತಿದ್ದ. ಅಲ್ಲದೇ ಮುತ್ತು ಕೊಡು, ನಾನು ಕರೆದಲ್ಲಿಗೆ ಬಾ ನಿನಗೆ ಬೇಕಾದಷ್ಟು ಹಣ ಕೊಡುವೆ ಎಂದು ಒತ್ತಾಯಿಸುತ್ತಿದ್ದ ಎಂದು ತನ್ನ ನೋವು ಹಂಚಿಕೊಂಡಿದ್ದಾಳೆ.

ಈ ಪ್ರಕರಣದಿಂದ ನಾನು ಖಿನ್ನತೆಗೊಳಗಾಗಿದ್ದೆ. ಮಾಧ್ಯಮಗಳಲ್ಲಿ ಬರುತ್ತಿದ್ದ ಮೀಟೂ ಸುದ್ದಿಗಳೇ ನನಗೆ ಪ್ರೇರಣೆ ಎಂದಿದ್ದಾಳೆ. ಯುವತಿ ಹಾಸನ ಎಸ್‍ಪಿ ಪ್ರಕಾಶ್ ಗೌಡ ನೆರವಿಗೆ ಬರುವಂತೆ ಮನವಿ ಮಾಡಿ ಇಂತಹ ಕಾಮುಕರಿಗೆ ಕಾನೂನು ಚೌಕಟ್ಟಿನಲ್ಲಿ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾಳೆ.

ನಿವೃತ್ತಿ ಅಂಚಿನಲ್ಲಿರುವ ಹಿರಿಯ ವಯಸ್ಸಿನ ನೌಕರ, ತಾನು ಹದಿನೈದು ಸಾವಿರ ಹಣಕೊಡುತ್ತೇನೆ ಮುತ್ತು ಕೊಡು ಎಂದು ಕೇಳಿದ್ದಾಗಿ ಒಪ್ಪಿಕೊಂಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿದೆ.

Comments are closed.