ಅಂತರಾಷ್ಟ್ರೀಯ

ಪ್ರಿಯಕರನಿಗಾಗಿ ಹೊಕ್ಕುಳು ಗಿಫ್ಟ್ ನೀಡಿದ ಯುವತಿ

Pinterest LinkedIn Tumblr


ಮೆಕ್ಸಿಕೋ: ಯುವತಿಯೊಬ್ಬಳು ತನ್ನ ಪ್ರಿಯಕರನಿಗಾಗಿ ತನ್ನ ಹೊಕ್ಕುಳುವನ್ನು ತೆಗೆದು ಗಿಫ್ಟ್ ಆಗಿ ನೀಡಿದ ವಿಚಿತ್ರ ಪ್ರಕರಣವೊಂದು ಮೆಕ್ಸಿಕೋದಲ್ಲಿ ನಡೆದಿದೆ.

ಫಾಲಿನ ಕ್ಯಾಸಿಲಾಸ್ ಲ್ಯಾಂಡ್‍ರೋಸ್(23) ಪ್ರಿಯಕರನಿಗೆ ತನ್ನ ಹೊಕ್ಕುಳುವನ್ನು ಗಿಫ್ಟ್ ಆಗಿ ನೀಡಿದ್ದಾಳೆ. ಫಾಲಿನ ತನ್ನ ಪ್ರಿಯಕರನನ್ನು ಖುಷಿಪಡಿಸಲು ಶಸ್ತ್ರಚಿಕಿತ್ಸೆ ಮೂಲಕ ತನ್ನ ಹೊಕ್ಕುಳುವನ್ನು ತೆಗೆಸಿದ್ದಾಳೆ. ಆ ಹೊಕ್ಕುಳುವನ್ನು ತನ್ನ ಪ್ರೀತಿಯ ಪ್ರತೀಕವಾಗಿ ಉಡುಗೊರೆಯನ್ನಾಗಿ ನೀಡಿದ್ದಾಳೆ. ಆದರೆ ಇದರಿಂದ ಈಗ ಅವಳ ಪ್ರೀತಿ ಮುರಿದುಬಿದ್ದಿದೆ.

ನಾನು ಮೂರು ವರ್ಷಗಳ ಹಿಂದೆ ನನ್ನ ಹೊಕ್ಕುಳಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ನಾನು ನನ್ನ ದೇಹದ ತುಂಬ ಟ್ಯಾಟೂ ಹಾಕಿಸಿಕೊಂಡಿದ್ದೇನೆ. ಇದು ನನ್ನ ಕುಟುಂಬಕ್ಕೆ ಇಷ್ಟವಿಲ್ಲ. ಹಾಗಾಗಿ ಅವರು ನನ್ನನ್ನು ಬಿಟ್ಟುಹೋದರು ಎಂದು ಫಾಲಿನ ಪ್ರತಿಕೆಯೊಂದಕ್ಕೆ ಹೇಳಿದ್ದಾಳೆ.

ಫಾಲಿನ ತನ್ನ ಕುಟುಂಬದವರ ಮಾತು ಕೇಳದೇ ದೇಹದ ಮೇಲೆ ಟ್ಯಾಟೂ ಹಾಕಿಸಿಕೊಂಡಳು. ಅಲ್ಲದೇ ತನ್ನ ನಾಲಗೆಗೆ ಪಿಯರ್ಸಿಂಗ್ ಕೂಡ ಮಾಡಿಸಿದ್ದಳು. ಫಾಲಿನ ಈ ರೀತಿ ಮಾಡಿಸುವಾಗ ಆಕೆ ಯಾವುದರ ಬಗ್ಗೆಯೂ ಯೋಚಿಸಲಿಲ್ಲ. ಹೊಕ್ಕುಳು ತೆಗೆದು ಮೂರು ವರ್ಷಗಳ ನಂತರ ಆಕೆಯ ಆರೋಗ್ಯದಲ್ಲಿ ಏರುಪೇರಾಗಿದೆ. ವೈದ್ಯರು ಪರಿಶೀಲಿಸಿದ್ದಾಗ ಆಕೆಯ ಜೀವಕ್ಕೆ ಅಪಾಯವಿದೆ ಎಂಬುದು ತಿಳಿದುಬಂದಿದೆ. ಸದ್ಯ ಫಾಲಿನಗೆ ಈಗ ತನ್ನ ತಪ್ಪಿನ ಅರಿವಾಗಿದೆ. ಆ ಸಮಯದಲ್ಲಿ ತನ್ನ ಕುಟುಂಬದವರ ಮಾತು ಕೇಳಿದಿದ್ದರೆ ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಂದುಕೊಳ್ಳುತ್ತಿದ್ದಾಳೆ ಎಂದು ವರದಿಯಾಗಿದೆ.

ಫಾಲಿನ ತನ್ನ ಪ್ರಿಯಕರನ ಮಾತನ್ನು ನಂಬಿ ಹೊಕ್ಕುಳಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದಳು. ಈ ಶಸ್ತ್ರಚಿಕಿತ್ಸೆ ಮಾಡಿಸುವಾಗ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ. ನನ್ನ ಪ್ರಿಯಕರ ನನಗೆ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾನೆ. ಯಾವುದೇ ಸಮಯದಲ್ಲೂ ಆತ ನನ್ನ ಕೈಬಿಡುವುದಿಲ್ಲ. ಆತ ನನ್ನ ಕಷ್ಟದ ಸಮಯದಲ್ಲಿ ನನ್ನ ಜೊತೆಯಲ್ಲಿದ್ದ ಹಾಗೂ ಮುಂದೆಯೂ ಇರುತ್ತಾನೆ. ಡೇನಿಯಲ್ ನನ್ನ ಈ ಉಡುಗೊರೆಯನ್ನು ಜೋಪಾನವಾಗಿ ನೋಡಿಕೊಳ್ಳುತ್ತಾನೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಈಗ ನನ್ನನ್ನು ಆತ ಬಿಟ್ಟು ಹೋಗಿದ್ದಾನೆ ಎಂದು ಫಾಲಿನ ಹೇಳಿದ್ದಾಳೆ.

Comments are closed.