ಕರ್ನಾಟಕ

ತಮಿಳುನಾಡು ಮೂಲದ ಸೀರೆ ಅಂಗಡಿ ವ್ಯವಸ್ಥಾಪನೋರ್ವನ ಕಿರುಕುಳ ತಾಳಲಾರದೇ ಕನ್ನಡಿಗ ಆತ್ಮಹತ್ಯೆ

Pinterest LinkedIn Tumblr


ಹಾಸನ: ಕನ್ನಡಿಗನೋರ್ವ ಕಿರಕುಳ ತಾಳಲಾರದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕರ್ನಾಟಕದಲ್ಲಿಯೇ ನಡೆದಿದೆ. ತಮಿಳುನಾಡು ಮೂಲದ ಪ್ರತಿಷ್ಠಿತ ಸೀರೆ ಅಗಂಡಿಯೊಂದರಲ್ಲಿ ಕೆಸಲ ಮಾಡುತ್ತಿದ್ದ ಉದ್ಯೋಗಿಗೆ ಕನ್ನಡಿಗ ಎಂಬ ಕಾರಣಕ್ಕೆ ಪ್ರತಿನಿತ್ಯ ಕಿರುಕುಳ ನೀಡಲಾಗುತ್ತಿತ್ತು. ಇದೀಗ ಕಿರುಕುಳಕ್ಕೆ ಬೇಸತ್ತ ಕನ್ನಡಿಗ ಸೆಲ್ಫಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಆಲಗೋಡನಹಳ್ಳಿ ಗ್ರಾಮದ ಸೇವಾರ್ಥ್ ಮೃತ ಯುವಕ​. ತಮಿಳುನಾಡು ಮೂಲದ ಪಿಎಸ್ ಆರ್ ಸೀರೆ ಎಂಬ ಕಂಪನಿಯಲ್ಲಿ ಸೇವಾರ್ಥ್​​​ ಉದ್ಯೋಗಿಯಾಗಿದ್ದ. ಈ ವ್ಯವಸ್ಥಾಪಕ ಸೇವಾರ್ಥ್​​ ಕನ್ನಡಿಗ ಎಂಬ ಕಾರಣಕ್ಕೆ ದಿನಕ್ಕೊಂದು ಕ್ಷುಲ್ಲಕ ಕಾರಣ ಹುಡಕಿ ಕಿರುಕುಳ, ಹಿಂಸೆ ನೀಡುತ್ತಿದ್ದ.

ಒಂದು ದಿನ ಸೇವಾರ್ಥ್​​ ಎರಡು ದಿನ ರಜೆ ತೆಗೆದುಕೊಂಡಿದ್ದಾನೆ. ಬಳಿಕ ವಿಚಾರ ತಿಳಿದ ಕೂಡಲೇ ವ್ಯವಸ್ಥಾಪಕ ಸೇವಾರ್ಥ್​​ಗೆ ಮಾನಸಿಕವಾಗಿ ಹಿಂಸೆ ನೀಡಿ ಕಂಪನಿಯಿಂದ ಹೊರಹಾಕಿದ್ದಾನೆ. ಈ ಎಲ್ಲಾ ಕಾರಣಗಳಿಂದ ಬೇಸತ್ತ ಸೇವಾರ್ಥ್​​​ ಸೆಲ್ಫೀ ವಿಡಿಯೋ ಮಾಡಿಕೊಂಡು ನೇಣು ಬಿಗಿದು ಆತ್ಮಹತ್ಯೆಗೆ ಕೊರಳೊಡ್ಡಿದ್ದಾನೆ ಎನ್ನಲಾಗಿದೆ.

ಹಾಸನ ನಗರದ ಬಸಟ್ಟಿಕೊಪ್ಪಲಿನಲ್ಲಿ ತಾನು ವಾಸವಿದ್ದ ರೂಮಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೂ ಮುನ್ನ ಮೊಬೈಲ್​ನಲ್ಲಿ ಸೆಲ್ಫೀ ವೀಡಿಯೋ ಮಾಡಿರುವ ಸೇವಾರ್ಥ್, ಗೆಳೆಯರಿಗೆ ಕಳಿಸಿ ಆತ್ಮಹತ್ಯೆ ವಿಚಾರ ಮುಟ್ಟಿಸಿದ್ದಾನೆ ಎಂದು ತಿಳಿದು ಬಂದಿದೆ.

ಸಾಲಗಾಮೆ ರಸ್ತೆಯಲ್ಲಿರುವ ಪಿಎಸ್ ಆರ್ ಸೀರೆ ಅಂಗಡಿ ವ್ಯವಸ್ಥಾಪಕ ಸೀತಾರಾಮನ್, ಪ್ರಕಾಶ್, ಆಲದೊರೈ ಮತ್ತು ಪ್ರದೀಪ್ ಎಂಬ ನಾಲ್ಕು ಮಂದಿ ಮೇಲಾಧಿಕಾರಿಗಳ ವಿರುದ್ಧ 306 ಸಕ್ಷನ್ ಅಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದು, ಶೀಘ್ರದಲ್ಲೇ ಬಂಧಿಸಲಿದ್ದೇವೆ ಎಂದು ಪೊಲೀಸ್​​ ವರಿಷ್ಠಾಧಿಕಾರಿಗಳು ನ್ಯೂಸ್​​-18 ಗೆ ತಿಳಿಸಿದ್ದಾರೆ.

Comments are closed.