ಮನೋರಂಜನೆ

ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘ಅವನೇ ಶ್ರೀಮನ್ನಾರಾಯಣ’ ದೇಶದ್ಯಾಂತ ತೆರೆಗೆ ಸಿದ್ಧತೆ!

Pinterest LinkedIn Tumblr


ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಅಭಿನಯದ ಶ್ರೀಮನ್ನಾರಾಯಣ ಸಿನಿಮಾ ದೇಶದ್ಯಾಂತ ತೆರೆಕಾಣಲು ಸಜ್ಜಾಗುತ್ತಿದೆ.

ಈ ಸಿನಿಮಾ ಸಚಿನ್ ರವಿ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ರಕ್ಷಿತ್ ಅವರ ಒಡೆತನದಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಎಚ್.ಕೆ. ಪ್ರಕಾಶ್ ಅವರ ಶ್ರೀ ದೇವಿ ಎಂಟರ್ ಪ್ರೈಸಸ್‍ನಲ್ಲಿ ನಿರ್ಮಾಣವಾಗಿದೆ. 80 ರ ದಶಕದ ಹಳೆಯ ಕಥೆಯನ್ನು ಹೊಂದಿರುವ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ.

ಈ ಹಿಂದೆ ರಕ್ಷಿತ್ ಶೆಟ್ಟಿ ಅಭಿನಯಿಸಿದ್ದ ಉಳಿದವರು ಕಂಡಂತೆ ಸಿನಿಮಾ ತಮಿಳು ಮತ್ತು ಮಲೆಯಾಳಂ ನಲ್ಲಿಯೂ ನಿರ್ಮಾಣವಾಗಿತ್ತು. ಅಷ್ಟೇ ಅಲ್ಲದೇ ಕಿರಿಕ್ ಪಾರ್ಟಿ ಸಿನಿಮಾ ಕೂಡಾ ತೆಲುಗು ಭಾಷೆಯಲ್ಲಿ ಮರು ನಿರ್ಮಾಣ ಮಾಡಲಾಗಿತ್ತು. ಇದೀಗ ಹಿಂದಿ ಭಾಷೆಯಲ್ಲೂ ನಿರ್ಮಾಣವಾಗುತ್ತಿದೆ.

ರಕ್ಷಿತ್ ಶೆಟ್ಟಿ ಅಭಿನಯಿಸಿರುವ ಅವನೇ ಶ್ರೀ ಮನ್ನಾರಾಯಣ ಸಿನಿಮಾ ದೊಡ್ಡ ಬಜೆಟ್ ಸಿನಿಮಾವಾಗಿದ್ದು, ಏಕಕಾಲದಲ್ಲಿ ಎಲ್ಲಾ ಭಾಷೆಯಲ್ಲೂ ಬಿಗ್ ಸ್ಕ್ರೀನ್ ಮೇಲೆ ತೆರೆಕಾಣಲಿದೆ. ಈ ಸಿನಿಮಾ ಮಾರುಕಟ್ಟೆಯಲ್ಲಿ ಉತ್ತಮ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತಿದೆ. ಅವನೇ ಶ್ರೀಮನ್ನಾರಾಯಣ ಸಿನಿಮಾ ಚಿತ್ರರಂಗದಲ್ಲೇ ದೊಡ್ಡ ಮಟ್ಟದಲ್ಲಿ ಸೆಡ್ಡು ಹೊಡೆಯಬಹುದು ಎಂಬ ನಿರೀಕ್ಷೆಯಲ್ಲಿದೆ ಚಿತ್ರತಂಡ.

ಈ ಸಿನಿಮಾದಲ್ಲಿ ಸಾನ್ವಿ ಶ್ರೀವಾತ್ಸವ್ ಲೀಡ್ ರೋಲ್‍ನಲ್ಲಿ ಅಭಿನಯಿಸುತ್ತಿದ್ದು, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಮತ್ತು ಬಾಲಾಜಿ ಮನೋಹರ್ ಅವರು ಕೂಡ ಅಭಿನಯಿಸಿದ್ದಾರೆ. ಸ್ವಲ್ಪ ಪ್ರಮಾಣದ ಚಿತ್ರೀಕರಣ ಬಾಕಿ ಇದ್ದು, ಅದೆಲ್ಲ ಪೂರ್ಣಗೊಂಡ ಬಳಿಕ ಮುಂದಿನ ವರ್ಷ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಬಿಡುಗಡೆ ಮಾಡಬೇಕೆಂದು ಚಿತ್ರತಂಡ ನಿರ್ಧರಿದೆ.

Comments are closed.