ಕರ್ನಾಟಕ

ಇಂದಿನಿಂದ ತಿಂಡಿ ಪೋತರ ಹಬ್ಬ: ದೇವೇಗೌಡರಿಂದ ಚಾಲನೆ

Pinterest LinkedIn Tumblr


ಬೆಂಗಳೂರು: ನಗರದ ಆಹಾರ ಹಾಗೂ ಕಲಾಪ್ರಿಯರಿಗಾಗಿ ನಗರದಲ್ಲಿ’ತಿಂಡಿ ಪೋತರ ಹಬ್ಬ’ ಆಚರಣೆಗೊಳ್ಳುತ್ತಿದೆ.

ವೀಕ್ಷಣ ವೆಂಚರ್‌ ಸಂಸ್ಥೆ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿಅ. 5ರಿಂದ 7ರವರೆಗೆ ನಡೆಯುವ ತಿಂಡಿ ಪೋತರ ಹಬ್ಬದಲ್ಲಿ ನಾನಾ ಶೈಲಿಯ ರುಚಿಕರ ಆಹಾರ ದೊರೆಯಲಿದೆ, ಮನಸ್ಸಿಗೆ ಮುದನೀಡುವ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ ಎಂದು ಕಲಾವಿದ ಸಿಹಿಕಹಿ ಚಂದ್ರು ಪತ್ರಿಕಾಗೋಷ್ಟಿಯಲ್ಲಿಬುಧವಾರ ತಿಳಿಸಿದರು.

ಮೂರು ದಿನಗಳ ಕಾಲ ನಡೆಯುವ ಈ ಹಬ್ಬಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಚಾಲನೆ ನೀಡಲಿದ್ದು , ವಿಧಾನ ಪರಿಷತ್‌ ಸದಸ್ಯ ಟಿ.ಎ. ಶರವಣ, ಸಂಸದ ಪಿ.ಸಿ.ವೋಹನ್‌, ನಿವೃತ್ತ ಐಪಿಎಸ್‌ ಅಧಿಕಾರಿ ಶಂಕರ ಬಿದರಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಹಬ್ಬದಲ್ಲಿನೂರಕ್ಕೂ ಹೆಚ್ಚು ಆಹಾರ ಮಳಿಗೆಗಳನ್ನು ತೆರೆಯಲಿದ್ದು , ಒಂದು ಸಾವಿರಕ್ಕೂ ಹೆಚ್ಚು ಬಗೆಯ ತಿಂಡಿ ತಿನಿಸುಗಳನ್ನು ಲಭ್ಯ ಇರಲಿವೆ. ಸಾಂಪ್ರದಾಯಿಕ ದಕ್ಷಿಣ ಹಾಗೂ ಉತ್ತರ ಭಾರತದ ಆಹಾರಗಳು, ದೇಸಿ ಮತ್ತು ವಿದೇಶಿ ತಿನಿಸುಗಳನ್ನು ಸವಿಯುವುದರ ಜತೆಗೆ ಸಂಗೀತ ಕಾರ್ಯಕ್ರಮ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಖ್ಯಾತ ಡ್ರಮ್ಸ್‌ ವಾದಕ ದೇವಾ, ವಯೋಲಿನ್‌ ವಾದಕ ವಿದ್ಯಾಶಂಕರ್‌ ಮತ್ತಿತರ ಕಲಾವಿದರು ಭಾಗವಹಿಸಲಿದ್ದು , ಮನರಂಜನಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು.

ಹಬ್ಬದ ಜತೆಗೆ ಸಾಮಾಜಿಕ ಕಳಕಳಿಯ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗುತ್ತಿದೆ. ನಿತ್ಯ ಸಂಜೆ ಉಳಿಯುವ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಅಗತ್ಯ ಇರುವವರಿಗೆ ಹಂಚಲಾಗುವುದು ಎಂದು ಹೇಳಿದರು.

Comments are closed.