
ಮಡಿಕೇರಿ: ನಿಮ್ಮಂತಹವರಿಂದಾಗಿ ಪಕ್ಷ ಉದ್ಧಾರವಾಗಿಲ್ಲ. ಜನಪರ ಕೆಲಸ ಮಾಡಿ. ಕೇಂದ್ರದ ತಂಡಕ್ಕೆ ಯಾಕೆ ತಪ್ಪು ಮಾಹಿತಿ ನೀಡುತ್ತಿದ್ದೀರಿ..ಇದು ಸಂಸದ ಪ್ರತಾಪ್ ಸಿಂಹ ಅವರಿಗೆ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡ ಪರಿ!
ಇತ್ತೀಚೆಗೆ ಪ್ರವಾಹ, ಭೀಕರ ಮಳೆಯಿಂದ ತತ್ತರಿಸಿ ಹೋಗಿದ್ದ ಕೊಡಗು ಜಿಲ್ಲೆಯ ಪರಿಸ್ಥಿತಿ ಪರಿಶೀಲಿಸಲು ಬಂದ ಕೇಂದ್ರದ ತಂಡಕ್ಕೆ ತಪ್ಪು ಮಾಹಿತಿ ನೀಡಿರುವುದಕ್ಕೆ ಸ್ಥಳೀಯ ಬಿಜೆಪಿ ಮುಖಂಡ ಎಂಬಿ ದೇವಯ್ಯ ನೇರವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು.
ಕೇಂದ್ರದ ಪರಿಶೀಲನೆ ತಂಡದ ಜೊತೆ ಪ್ರತಾಪ್ ಸಿಂಹ ಮಡಿಕೇರಿಯ ಹೆಬ್ಬೆಟ್ಟಗೇರಿ ಗ್ರಾಮಕ್ಕೆ ಬಂದಿದ್ದು, ಈ ವೇಳೆ ತಂಡಕ್ಕೆ ಭೂ ಪರಿವರ್ತನೆ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕೆ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ನಿಮ್ಮನ್ನು ಆರಿಸಿ ಕಳುಹಿಸಿದ್ದೇ ನಮ್ಮ ತಪ್ಪು. ನಿಮ್ಮಂಥವರಿಂದಾಗಿ ಪಕ್ಷ ಉದ್ಧಾರ ಆಗಿಲ್ಲ. ಪಕ್ಷದಲ್ಲಿ ನನ್ನ ವಿರುದ್ಧ ಏನು ಬೇಕಾದ್ರೂ ಕ್ರಮ ಕೈಗೊಳ್ರೀ ಎಂದು ದೇವಯ್ಯ ವಾಗ್ದಾಳಿ ನಡೆಸಿದರು.
Comments are closed.