ಕರ್ನಾಟಕ

ಜೆಡಿಎಸ್​ ಸೇರಲಿರುವ 5 ಮಂದಿ ಬಿಜೆಪಿ ಶಾಸಕರು?

Pinterest LinkedIn Tumblr


ಬೆಂಗಳೂರು: ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದ್ದ ಬಿಜೆಪಿಗೆ ಎದುರೇಟು ನೀಡಲು ಜೆಡಿಎಸ್ ಸಜ್ಜಾಗಿ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಆಪರೇಶನ್ ಜೆಡಿಎಸ್ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಬಿಜೆಪಿ ಶಾಸಕರನ್ನ ಕರೆತರುವ ಜವಾಬ್ದಾರಿ ಸಚಿವ ಸಿ.ಎಸ್ ಪುಟ್ಟರಾಜು ಹೆಗಲಿಗೆ ನೀಡಿದ್ದಾರೆ. ಮೈಸೂರು ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಒಂದು ಎರಡು ಭಾರಿ ಆಯ್ಕೆಯಾದ ಶಾಸಕರನ್ನು ಸೆಳೆಯಲು ಜೆಡಿಎಸ್ ಮುಂದಾಗಿದೆ. ಜಾರಕಿಹೊಳಿ ಸಹೋದರರು ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರು ಕೈ ಕೊಟ್ಟರೆ ಬಿಜೆಪಿ ಶಾಶಕರಿಂದ ರಾಜಿನಾಮೆ ಕೊಡಿಸಿ ಆಪರೇಷನ್ ಜೆಡಿಎಸ್ ಮಾಡಲು ಸಜ್ಜಾಗಿದೆ ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಮಾಹಿತಿ ಲಭ್ಯವಾಗಿದೆ.

ಹಿರಿಯೂರು ಶಾಸಕಿ ಪೂರ್ಣಿಮಾ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಗುಂಡ್ಲುಪೇಟೆ ಶಾಸಕ ನಿರಂಜನ್, ನಂಜನಗೂಡು ಶಾಸಕ ಹರ್ಷವರ್ಧನ್, ಚಾಮರಾಜ ಶಾಸಕ ನಾಗೇಂದ್ರ ಈ 5 ಜನ ಶಾಸಕರು ಬಿಜೆಪಿ ಬಿಟ್ಟು ಜೆಡಿಎಸ್ ಸೇರಲು ಉತ್ಸುಕತೆ ತೊರಿದ್ದಾರೆ ಎಂದು ತಿಳಿದು ಬಂದಿದೆ.

Comments are closed.