ರಾಷ್ಟ್ರೀಯ

ಮಲ್ಯ ಪರಾರಿಗೆ ಜೇಟ್ಲಿ ಸಹಕಾರ, ರಾಜೀನಾಮೆ ನೀಡಲಿ: ರಾಹುಲ್

Pinterest LinkedIn Tumblr


ಹೊಸದಿಲ್ಲಿ: ವಿದೇಶಕ್ಕೆ ಪರಾರಿಯಾಗುವ ಮೊದಲು ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದೆ ಎಂಬ ವಿಜಯ್ ಮಲ್ಯ ಹೇಳಿಕೆ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಸಚಿವ ಜೇಟ್ಲಿ ಮಲ್ಯ ಪರಾರಿಯಾಗಲು ಸಹಕಾರ ನೀಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಮಲ್ಯ ವಿರುದ್ಧದ ಅರೆಸ್ಟ್‌ ನೋಟಿಸ್ ಅನ್ನು ತಿರುಚಿ ಇನ್ಫಾರ್ಮ್ ನೋಟಿಸ್ ಎಂದು ಬಿಂಬಿಸಲಾಗಿದೆ. ಇದರಿಂದಾಗಿ ಮಲ್ಯ ಸುಲಭದಲ್ಲಿ ವಿದೇಶಕ್ಕೆ ಪರಾರಿಯಾಗಲು ಸಾಧ್ಯವಾಗಿದೆ. ಮಲ್ಯಗೆ ಅನುಕೂಲ ಮಾಡಿಕೊಟ್ಟಿರುವ ಜೇಟ್ಲಿ ರಾಜೀನಾಮೆ ನೀಡಬೇಕು ಎಂದು ರಾಹುಲ್ ಒತ್ತಾಯಿಸಿದ್ದಾರೆ.

ಇಬ್ಬರ ಮಧ್ಯೆ ಮಾತುಕತೆ ನಡೆದಿದ್ದು, ಅದರ ಪ್ರಕಾರ ಮಲ್ಯ ಪಲಾಯನಕ್ಕೆ ಅವಕಾಶ ನೀಡಲಾಗಿದೆ. ಸಚಿವ ಜೇಟ್ಲಿ ಪ್ರತಿ ಸಭೆ ಮತ್ತು ಮಾತುಕತೆಯ ಬಗ್ಗೆ ಬ್ಲಾಗ್ ಬರೆಯುತ್ತಾರೆ. ಆದರೆ ವಿಜಯ್ ಮಲ್ಯ ಜತೆಗಿನ ಮಾತುಕತೆಯನ್ನು ಅವರು ಬಹಿರಂಗಪಡಿಸಿಲ್ಲ. ಕೆಲವೇ ಶಬ್ಧ ಮಾತನಾಡಿರುವುದಾಗಿ ಜೇಟ್ಲಿ ಹೇಳಿಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಇಬ್ಬರೂ ಚರ್ಚಿಸಿ, ನಂತರ ಮಲ್ಯ ಪರಾರಿಯಾಗಲು ಸೂಕ್ತ ಅವಕಾಶ ಕಲ್ಪಿಸಲಾಗಿದೆ.

ಮಲ್ಯ ಜತೆಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಜೇಟ್ಲಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು. ಜತೆಗೆ ಪ್ರಕರಣದಲ್ಲಿ ನೋಟಿಸ್ ತಿದ್ದಿರುವುದು ಯಾಕೆ ಎಂದು ಅವರು ಹೇಳಬೇಕು, ಇಲ್ಲವಾದಲ್ಲಿ ರಾಜೀನಾಮೆ ನೀಡಬೇಕು ಎಂದು ರಾಹುಲ್ ಒತ್ತಾಯಿಸಿದ್ದಾರೆ.

Comments are closed.