ಕರ್ನಾಟಕ

ಅಮೀರ್ ಖಾನ್ ಫೋಟೋ ಹಾಕಿ ಪೆಟ್ರೋಲ್ ಬೆಲೆ ಹೋಲಿಕೆ ಮಾಡಿದ ರಮ್ಯಾ

Pinterest LinkedIn Tumblr

ಬೆಂಗಳೂರು: ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಅಧಿಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರು `ದಂಗಲ್’ ಸಿನಿಮಾದ ಅಮೀರ್ ಖಾನ್ ಫೋಟೋ ಹಾಕಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿದ್ದರಿಂದ ಸೋಮವಾರ ‘ಭಾರತ್ ಬಂದ್’ಗೆ ಕಾಂಗ್ರೆಸ್ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಮ್ಯಾ ಕ್ರಿಕೆಟ್ ತಂಡದ ಆಟಗಾರರು ಗಳಿಸುವ ರನ್ ಗಿಂತ ಭಾರತದಲ್ಲಿ ಪೆಟ್ರೋಲ್ ದರವೇ ಹೆಚ್ಚಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಈಗ `ದಂಗಲ್’ ಸಿನಿಮಾದಲ್ಲಿ ಅಭಿನಯಿಸಿರುವ ಅಮೀರ್ ಖಾನ್ ಫೋಟೋವನ್ನು ಹಾಕಿ ಟೀಕಿಸಿದ್ದಾರೆ.

ರಮ್ಯಾ ಟ್ವೀಟ್:
`ದಂಗಲ್’ ಸಿನಿಮಾದಲ್ಲಿ ಅಮೀರ್ ಖಾನ್ ಅವರು ಎರಡು ಶೇಡ್‍ನಲ್ಲಿ ಅಭಿನಯಿಸಿದ್ದರು. ಒಂದು ಫಿಟ್ ಆಗಿರುವ ಯುವಕನ ಪಾತ್ರ, ಮತ್ತೊಂದು ಅಪ್ಪನ ಪಾತ್ರವನ್ನು ಮಾಡಿದ್ದರು. ಈಗ ಅದೇ ಸಿನಿಮಾದ ಎರಡು ಫೋಟೋವನ್ನು ಪೋಸ್ಟ್ ಮಾಡಿ ಯುಪಿಎ ಮತ್ತು ಎನ್‍ಡಿಎ ಸರ್ಕಾರಕ್ಕೆ ಹೋಲಿಸಿ ಟೀಕಿಸಿದ್ದಾರೆ.

ಒಂದು ಕಡೆ ಅಮೀರ್ ಖಾನ್ ಯುವಕನಾಗಿ ಫಿಟ್ ಆಗಿರುವ ಫೋಟೋ ಹಾಕಿದ್ದು, ಅದರ ಮೇಲೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ಪೆಟ್ರೋಲ್ ಬೆಲೆ ಫಿಟ್ ಆಗಿ ಇತ್ತು ಎಂದು ಹೋಲಿಸಿದ್ದಾರೆ. ಅದೇ ರೀತಿ ಅಮೀರ್ ಖಾನ್ ನ ವಯಸ್ಸಾದ ಫೋಟೋ ಹಾಕಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದಲ್ಲಿ ಪೆಟ್ರೋಲ್ ಬೆಲೆ ಈ ರೀತಿ ಇದೇ ಎಂದು ಹೋಲಿಕೆ ಮಾಡಿ ಟೀಕಿಸಿದ್ದಾರೆ.

ಈ ಹಿಂದೆ ರಮ್ಯಾ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಇಂಗ್ಲೆಂಡ್ ವಿರುದ್ಧ ಗಳಿಸಿದ ರನ್‍ಗಿಂತ ಭಾರತದಲ್ಲಿ ಪೆಟ್ರೋಲ್ ದರವೇ ದುಬಾರಿ ಎನ್ನುವ ಮೂಲಕ ರಮ್ಯಾ ಟ್ವಿಟ್ಟರ್ ನಲ್ಲಿ ಕೇಂದ್ರ ಸರ್ಕಾರದ ಕಾಲೆಳೆದಿದ್ದರು.

ರಮ್ಯಾ ಅವರು ತಮ್ಮ ಟ್ವಿಟ್ಟರ್ ಮೂಲಕ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ವೈಯಕ್ತಿಕವಾಗಿ ರವೀಂದ್ರ ಜಡೇಜಾರವರು 86 ರನ್ ಗಳಿಸಿದ್ದಾರೆ. ಆದರೆ ಅವರು ಗಳಿಸಿದ್ದು, ಭಾರತದಲ್ಲಿ 2ನೇ ಅತ್ಯಧಿಕ ರನ್ ಆಗಿದೆ. ಮೊದಲನೇಯ ಅತ್ಯಧಿಕ ರನ್ ಭಾರತದ ಪೆಟ್ರೋಲ್ ದರವೇ 87 ಆಗಿದೆ ಎಂದು ಬರೆದುಕೊಂಡಿದ್ದರು.

Comments are closed.