ಕರ್ನಾಟಕ

ಜೆಡಿಎಸ್ ಗೆ ಆಪರೇಷನ್ ಕಮಲದ ಭೀತಿ!

Pinterest LinkedIn Tumblr


ಬೆಂಗಳೂರು: ಮೈತ್ರಿ ಸರ್ಕಾರ ಉರುಳಿಸುವ ಉದ್ದೇಶದಿಂದಲೇ ಸಚಿವ ಡಿಕೆ ಶಿವಕುಮಾರ್​ ಮೇಲೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಪ್ರಭಾವ ಬೀರಿ ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದೆ ಎಂಬ ಆರೋಪದ ನಡುವೆ ಜಾರಕಿಹೊಳಿ ಸಹೋದರರ ವರ್ತನೆ ಸಮ್ಮಿಶ್ರ ಸರ್ಕಾರ ಉಳಿವಿನ ಬಗ್ಗೆ ಪ್ರಶ್ನೆ ಮೂಡಿಸಿದೆ

ಅಲ್ಲದೇ ಹಿರಿಯ ನಾಯಕರ ಅಣತಿಯಂತೆ ರಾಜ್ಯ ನಾಯಕರು ಅಪರೇಷನ್​ ಕಮಲ ನಡೆಸಲು ಮುಂದಾಗಿದ್ದಾರೆ ಎಂಬ ವದಂತಿ ಸಮ್ಮಿಶ್ರ ಸರ್ಕಾರದ ನಾಯಕರನ್ನು ಚಿಂತೆಗೆ ಗುರಿ ಮಾಡಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಶಾಸಕರನ್ನು ಉಳಿಸಿಕೊಳ್ಳಲು ಜೆಡಿಎಸ್​ ವರಿಷ್ಠ ದೇವೇಗೌಡ ಅವರು ಮುಂದಾಗಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಪಕ್ಷದ ಶಾಸಕರೊಂದಿಗೆ ನಗರದ ಖಾಸಗಿ ಹೋಟೆಲ್​ನಲ್ಲಿ ಚರ್ಚಿಸಿದ ಜೆಡಿಎಸ್​ ವರಿಷ್ಠ ದೇವೇಗೌಡ ಅವರು ಶಾಸಕರ ಸಮಸ್ಯೆಯನ್ನು ಆಲಿಸಿ ಅವರಿಗೆ ಯಾವುದೇ ಕಾರಣಕ್ಕೂ ಆಮಿಷಗಳಿಗೆ ಬಲಿಯಾದಂತೆ ಮನವೊಲಿಸಿದರು.

ಕುಮಾರಸ್ವಾಮಿ ಮೇಲೆ ವಿಶ್ವಾಸವನ್ನಿಡಿ ಅವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರಲಿದ್ದಾರೆ. ಈ ಬಗ್ಗೆ ಸ್ವತಃ ರಾಹುಲ್ ಗಾಂಧಿ ಅವರೇ ಮಾತು ಕೊಟ್ಟಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಕುಮಾರಸ್ವಾಮಿ ಅವರ ಕೈ ಬಲಪಡಿಸಿ ಎಂದು ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿದೆ

ಸರ್ಕಾರ ಉರುಳದಂತೆ ತಡೆಯಲು ನಾಯಕರು ಕಸರತ್ತು ಮಾಡುತ್ತಿದ್ದು, ಎಲ್ಲಾ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಈ ಮೂಲಕ ಸಮ್ಮಿಶ್ರ ಸರ್ಕಾರದ ಉಳಿವಿಗೆ ತಂತ್ರ ರೂಪಿಸಿದ್ದಾರೆ.

Comments are closed.