ಕರ್ನಾಟಕ

4 ತಿಂಗಳ ಗರ್ಭಿಣಿಯ ಸಜೀವ ದಹನಕ್ಕೆ ಯತ್ನ!

Pinterest LinkedIn Tumblr


ಗೋಕಾಕ್‌ : ವರದಕ್ಷಿಣೆ ತರಲ್ಲಿಲ್ಲ, ತವರು ಮನೆಯ ಜಮೀನು ವರ್ಗಾವಣೆ ಮಾಡಿಸಿಲ್ಲ ಎಂಬ ಕಾರಣಕ್ಕೆ 27 ರ ಹರೆಯದ 4 ತಿಂಗಳ ಗರ್ಭಿಣಿಯನ್ನು ಆಕೆಯ ಪತಿ ಮತ್ತು ಮನೆಯವರು ಸಜೀವವಾಗಿ ದಹಿಸಿ ಕೊಲ್ಲಲು ಯತ್ನಿಸಿದ ಭೀಭತ್ಸ ಘಟನೆ ಮಂಗಳವಾರ ನಡೆದಿದೆ.

ಅನುಸೂಯಾ ಎಂಬಾಕೆಯನ್ನು ಆಕೆಯ ಪತಿ ಸಿದ್ದಪ್ಪ ತನ್ನ ಸಹೋದರ, ಆತನ ಪತ್ನಿ ಮತ್ತು ತಂದೆ, ತಾಯಿಯೊಂದಿಗೆ ಸೇರಿಕೊಂಡು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ . ಮೂರು ದಿನಗಳ ಹಿಂದೆ ತವರು ಮನೆಗೆ ಹೋಗಿ ವಾಪಾಸ್‌ ಬಂದ ಬಳಿಕ ತೀವ್ರ ಹಿಂಸೆ ನೀಡ ತೊಡಗಿದ್ದಾರೆ.

ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಸಜೀವವಾಗಿ ಕೊಲ್ಲಲು ಯತ್ನಿಸಿದ್ದಾರೆ. 90 % ಶೇಕಡಾ ಸುಟ್ಟು ಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿರುವ ಅನುಸೂಯಾಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.

ಘಟನೆ ಯ ಬಳಿಕ ಪತಿ ಸಿದ್ದಪ್ಪ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ಕುಟುಂಬದೊಂದಿಗೆ ಪರಾರಿಯಾಗಿದ್ದಾನೆ.

ಕುಲಗೋಡ ಪಟ್ಟಣದಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Comments are closed.