ಕರ್ನಾಟಕ

ಮಹಿಳೆಯ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪ; ಖ್ಯಾತ ಖಳನಟ ಧರ್ಮ ವಿರುದ್ಧ ದೂರು

Pinterest LinkedIn Tumblr

ಬೆಂಗಳೂರು: ಸಿನಿಮಾ ಶೂಟಿಂಗ್ ವೇಳೆ ಮಹಿಳೆಯ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪದ ಮೇಲೆ ಖ್ಯಾತ ಖಳನಟ ಧರ್ಮ ವಿರುದ್ಧ ದೂರು ದಾಖಲಾಗಿದೆ.

ಶೂಟಿಂಗ್ ಗಾಗಿ ಮಹಿಳೆಯನ್ನು ಕರೆಸಿಕೊಂಡ ಧರ್ಮ, ಆಕೆ ಬಂದ ತಕ್ಷಣ ಶೂಟಿಂಗ್ ರದ್ದಾಗಿದೆ ಎಂದು ಹೇಳಿ ಊಟಕ್ಕೆಂದು ಹೋಟೆಲ್​ಗೆ ಕರೆದೊಯ್ದಿದ್ದ. ಈ ವೇಳೆ ಊಟದಲ್ಲಿ ಮತ್ತು ಬರುವ ಔಷಧಿ ಹಾಕಿ ಅಶ್ಲೀಲ ವಿಡಿಯೋ ಮಾಡಿ, ಮನೆಗೆ ಹೇಳುವುದಾಗಿ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.

ಹಣ ನೀಡಬೇಕೆಂದು ಬೆದರಿಕೆ ಒಡ್ಡಿರುವ ಧರ್ಮ, ಈಗಾಗಲೇ ಮಹಿಳೆಯಿಂದ 16 ಲಕ್ಷ ಹಣವನ್ನ ಕಬಳಿಸಿದ್ದಾನೆ. ಕೊನೆಗೆ ಬೇಸತ್ತು ಸಂತ್ರಸ್ತ ಮಹಿಳೆ ಬೇಗೂರು ಠಾಣೆಗೆ ದೂರು ದಾಖಲಿಸಿದ್ದಾಳೆ.

ದೂರು ನೀಡಿ ಎರಡು ತಿಂಗಳಾಗಿದ್ದರೂ ಇದುವರೆಗೂ ಧರ್ಮನನ್ನು ಬಂಧಿಸಲು ಪೊಲೀಸರು ಮುಂದಾಗಿಲ್ಲ. ಎರಡು ತಿಂಗಳಿಂದಲೂ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಸಬೂಬು ಹೇಳುತ್ತಿದ್ದಾರೆ.

Comments are closed.