ಮನೋರಂಜನೆ

ನಟಿ ಪ್ರಿಯಾಂಕಾಳನ್ನು ಬಿಟ್ಟು ಕತ್ರಿನಾಳನ್ನು ಕೈ ಹಿಡಿದ ಸಲ್ಮಾನ್ ಖಾನ್ !

Pinterest LinkedIn Tumblr

ಬಾಲಿವುಡ್ ಸಲ್ಮಾನ್ ಖಾನ್ ಅಭಿನಯದ ಭರತ್ ಚಿತ್ರ ನಟಿ ಬದಲಾವಣೆಯಿಂದ ಸಾಕಷ್ಟು ಸುದ್ದಿ ಮಾಡುತ್ತಿದೆ.

ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಭರತ್ ಚಿತ್ರದಲ್ಲಿ ಇದಕ್ಕೂ ಮುನ್ನ ಗ್ಲೋಬಲ್ ನಟಿ ಎಂದೇ ಖ್ಯಾತಿಗಳಿಸಿರುವ ಪ್ರಿಯಾಂಕಾ ಚೋಪ್ರಾ ಅಭಿನಯಿಸಬೇಕಿತ್ತು. ಆದರೆ ಸಂಭಾವನೆ ವಿಚಾರವಾಗಿ ಚಿತ್ರದಂಡದ ನಡುವೆ ಒಮ್ಮತ ಮೂಡದಿದ್ದರಿಂದ ಪ್ರಿಯಾಂಕಾ ಚಿತ್ರದಿಂದ ಹೊರಬಂದಿದ್ದರು.

ಇದಾದ ಬಳಿಕ ಪ್ರಿಯಾಂಕಾ ಭರತ್ ಚಿತ್ರದಿಂದ ಹೊರಬಂದಿದ್ದಕ್ಕೆ ಪ್ರಿಯಾಂಕಾ ತನ್ನ ಗೆಳೆಯ ನಿಖ್ ಜೋನ್ಸ್ ಜತೆ ಮದುವೆ ಆಗುತ್ತಿದ್ದಾರೆ ಹೀಗಾಗಿ ಚಿತ್ರದಿಂದ ಬರಬಂದಿದ್ದಾಗಿ ವರದಿಯಾಗಿತ್ತು. ಇದೀಗ ತಿಳಿದುಬಂದ ವಿಷಯವೆಂದರೆ ಪ್ರಿಯಾಂಕಾ 14 ಕೋಟಿ ರುಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದು ಚಿತ್ರತಂಡ 8 ಕೋಟಿ ಸಂಭಾವನೆ ನೀಡುವುದಾಗಿ ಹೇಳಿದೆ. ಹೀಗಾಗಿ ಪ್ರಿಯಾಂಕಾ ಭರತ್ ಚಿತ್ರತಂಡದಿಂದ ಹೊರಬಂದಿದ್ದಾರೆ ಎನ್ನಲಾಗಿದೆ.

ಚಿತ್ರ ತಂಡ ಹೊಸ ನಟಿಯ ಅನ್ವೇಷಣೆಯಲ್ಲಿದ್ದು ಇದೀಗ ಕತ್ರಿನಾ ಕೈಫ್ ಚಿತ್ರಕ್ಕೆ ಆಹ್ವಾನ ನೀಡಲಾಗಿದೆ. ಇನ್ನು ಸಲ್ಮಾನ್ ಈ ಬಗ್ಗೆ ಟ್ವೀಟ್ ಮಾಡಿ ಭರತ್ ಚಿತ್ರತಂಡವನ್ನು ಸೇರಿಕೊಳ್ಳಲಿರುವ ಕತ್ರಿನಾ ಕೈಫ್ ಅವರಿಗೆ ನನ್ನ ಸ್ವಾಗತ.

ಒಂದು ಸುಂದರ ಮತ್ತು ಸೌಮ್ಯ ಹುಡುಗಿ ಕತ್ರಿನಾ ಕೈಫ್…ಭರತ್ ಜೀವನದಲ್ಲಿ ಕಾಲಿಡಲು ನಿಮಗೆ ಸ್ವಾಗತ ಎಂದು ಟ್ವೀಟ್ ಮಾಡಿದ್ದಾರೆ.

Comments are closed.