ರಾಷ್ಟ್ರೀಯ

ತನ್ನ ವಿವಾಹ ಸಮಯದಲ್ಲೇ ಪಾಸ್ ಪೋರ್ಟ್ ಕಳೆದು ಹೋಗಿದ್ದು ಸಹಾಯಕ್ಕೆ ಮನವಿ ಮಾಡಿದ ವ್ಯಕ್ತಿಗೆ ಸುಷ್ಮಾ ಸ್ವರಾಜ್ ಹೇಳಿದ್ದೇನು ?

Pinterest LinkedIn Tumblr

ನವದೆಹಲಿ: ಮುಂದಿನ ತಿಂಗಳು ತನ್ನ ವಿವಾಹಕ್ಕಾಗಿ ಭಾರತಕ್ಕೆ ಆಗಮಿಸಬೇಕಿದ್ದ ವ್ಯಕ್ತಿಯೊಬ್ಬ ಅಮೆರಿಕಾದಲ್ಲಿ ತನ್ನ ಪಾಸ್ ಪೋರ್ಟ್ ಕಳೆದುಕೊಂಡಿದ್ದು, ವಿವಾಹ ಸಮಯಕ್ಕೆ ಪಾಸ್ ಪೋರ್ಟ್ ಕೊಡಿಸುವಂತೆ ಟ್ವಿಟ್ಟರ್ ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಬಳಿ ಮನವಿ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್ ಸೂಕ್ತವಲ್ಲದ ಸಮಯದಲ್ಲಿ ನೀವು ಪಾಸ್ ಪೋರ್ಟ್ ಕಳೆದುಕೊಂಡಿದ್ದಿರೀ, ಆದರೆ ನಿಮ್ಮ ವಿವಾಹ ಸಮಯಗದೊಳಗೆ ನಿಮ್ಮ ಪಾಸ್ ಪೋರ್ಟ್ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಆಗಸ್ಟ್ 13 ರಿಂದ 15 ರವರೆಗೆ ತಮ್ಮ ವಿವಾಹವಿದ್ದು, ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ಪಾಸ್ ಪೋರ್ಟ್ ಕಳೆದು ಕೊಂಡಿರುವುದಾಗಿ ದೇವತಾ ರವಿ ತೇಜಾ ಎಂಬವರು ಟ್ವೀಟ್ ಮಾಡಿದ್ದರು. ತತ್ಕಾಲ್ ಪಾಸ್ ಪೋರ್ಟ್ ಮಾಡಿಸಿಕೊಡುವಂತೆ ಸುಷ್ಮಾ ಬಳಿ ಮನವಿ ಮಾಡಿಕೊಂಡಿದ್ದರು.

ಆ ವ್ಯಕ್ತಿಯ ಟ್ವೀಟ್ ಅನ್ನು ವಾಷಿಂಗ್ಟನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಟ್ವೀಟ್ ಗೆ ಟ್ಯಾಗ್ ಮಾಡಿರುವ ಸುಷ್ಮಾ ಸ್ವರಾಜ್ ಮಾನವೀಯತೆ ಆಧಾರದ ಮೇಲೆ ಅವರಿಗೆ ಪಾಸ್ ಪೋರ್ಟ್ ಕೊಡುವಂತೆ ಮನವಿ ಮಾಡಿದ್ದಾರೆ.

Comments are closed.