ಕರ್ನಾಟಕ

ತನಿಖೆಯಲ್ಲಿ ಪೊಲೀಸರಿಗಿಂತ ಮಾಧ್ಯಮದವರೇ ಸ್ಪೀಡ್‌!: ಹೈಕೋರ್ಟ್‌ ಅಭಿಪ್ರಾಯ

Pinterest LinkedIn Tumblr


ಬೆಂಗಳೂರು: ಉಡುಪಿ ಶೀರೂರು ಶ್ರೀಗಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಮಾಧ್ಯಮದವರು ಪೊಲೀಸರಿಗಿಂತ ವೇಗವಾಗಿದ್ದಾರೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರಕ್ಕೆ ತಡೆ ನೀಡುವಂತೆ ಶೀರೂರು ಮಠದ ಭಕ್ತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌, ಸುದ್ದಿ ಪ್ರಸಾರಕ್ಕೆ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ. . ಅಂದೇ ತನಿಖೆ ನಡೆಸಿ ಶಿಕ್ಷೆಯನ್ನೂ ನೀಡುತ್ತಾರೆ. ಪ್ರಕರಣ ಸಂಬಂಧ ಒಂದು ಕಡೆ ಪೊಲೀಸರಿಂದ ತನಿಖೆ ನಡೆಯುತ್ತಿದ್ದರೆ, ಮತ್ತೊಂದೆಡೆ ಮಾಧ್ಯಮಗಳಿಂದ ಪರ್ಯಾಯ ತನಿಖೆ ನಡೆಯುತ್ತಿದೆ ಎಂದಿದೆ. ಈ ಕುರಿತ ವಿಚಾರಣೆಯನ್ನು ಆ. 2ಕ್ಕೆ ಮುಂದೂಡಿದೆ.

ತನಿಖೆ ನಡೆಸಿ ವರದಿ ಸಲ್ಲಿಸುವವರೆಗೂ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರಕ್ಕೆ ನಿರ್ಬಂಧ ಹೇರಬೇಕು. ತನಿಖಾಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಬಾರದು ಎಂದು ಅರ್ಜಿದಾರರ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದ್ದರು.

Comments are closed.