ರಾಷ್ಟ್ರೀಯ

ಅತ್ಯಾಚಾರ, ಹಲ್ಲೆ, ಬೆತ್ತಲೆ ಹಿಂಸೆ: ಬಿಹಾರ ವಸತಿ ನಿಲಯದ ಕರ್ಮಕಾಂಡ ಬಿಚ್ಚಿಟ್ಟ ಸಂತ್ರಸ್ತರು

Pinterest LinkedIn Tumblr


ಪಾಟ್ನಾ: ಬಿಹಾರದ ಮುಜಾಫರ್​​ಪುರ್​ನ ಸರ್ಕಾರಿ ಅನುದಾನಿತ ವಸತಿ ನಿಲಯದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಹುಡುಗಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಭಯಾನಕ ಅಂಶಗಳು ಬೆಳಕಿಗೆ ಬರುತ್ತಿವೆ. ಅತ್ಯಾಚಾರ, ಹಲ್ಲೆ, ಕಿರುಕುಳ ಮತ್ತು ದೀರ್ಘ ಸಮಯದವರೆಗೆ ಬೆತ್ತಲಾಗಿ ಕೂರಿಸಿದಂತಹ ಬೆಚ್ಚಿ ಬೀಳಿಸುವಂತಹ ಕಿರುಕುಳ ನಡೆಸಿರುವುದು ಬೆಳಕಿಗೆ ಬಂದಿದೆ.

ನಿರಂತರ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹುಡುಗಿಯರು ತನಿಖಾಧಿಕಾರಿ ಮುಂದೆ ತಮಗಾದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ. ಹಲವು ಜನ, ವಸತಿ ನಿಲಯದ ಸಿಬ್ಬಂದಿಯಿಂ್ ನಿರಂತರ ದೌರ್ಜನ್ಯಕ್ಕೊಳಗಾಗಿ ಮೈತುಂಬಾ ಆಗಿರುವ ಗಾಯಗಳನ್ನ ಸಂತ್ರಸ್ತ ಬಾಲಕಿ ತೋರಿಸಿದ್ಧಾರೆ.

ನಿನ್ನ ಮೇಲೆ ಹೇಗೆ ಹಲ್ಲೆ ನಡೆಸಿದರು ಎಂದು ಕೇಳಿದ್ದಕ್ಕೆ ಆಕೆಯ ಉತ್ತರ ನಿಜಕ್ಕೂ ಆತಂಕಕಾರಿಯಾಗಿತ್ತು. ನನ್ನ ಬಟ್ಟೆ ಬಿಚ್ಚಿಸಿ, ಮಹಡಿಗೆ ಮೇಲೆ ಕರೆದೊಯ್ದು ಕಬ್ಬಿಣದ ರಾಡ್​ಗಳಿಂದ ಹಲ್ಲೆ ನಡೆಸಿದರು ಎಂದು ಸಂತ್ರಸ್ತ ಬಾಲಕಿ ಹೇಳಿಕೊಂಡಿದ್ದಾಳೆ. ವಿಚಾರಣೆ ವೇಳೆ ಸಂತ್ರಸ್ತ ಬಾಲಕಿ ಮತ್ತು ತನಿಖಾಧಿಕಾರಿ ನಡುವೆ ನಡೆದ ಮಾತುಕತೆಯ ವಿವರ ಇಲ್ಲಿದೆ.

ತನಿಖಾಧಿಕಾರಿ: ಈ ಫೋಟೋ ನೋಡು. ಯಾರಿವನು..? ಇವನು ನಿನಗೇನು ಮಾಡಿದ..?(ಬಾಲಕಿ ಮೋಬೈಲಿನಲ್ಲಿ ಫೋಟೋಗಳನ್ನ ತೋರಿಸುತ್ತಾ)

ಸಂತ್ರಸ್ತ ಬಾಲಕಿ: ಇವನು ನಮ್ ಹೆಡ್ ಸಾರ್.. ಇವನು ಹಲವು ಬಾರಿ ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾನೆ.

ತನಿಖಾಧಿಕಾರಿ: ಇವನಲ್ಲದೆ, ಬೇರೆ ಯಾರಾದರೂ ನಿಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರಾ..?

ಸಂತ್ರಸ್ತ ಬಾಲಕಿ: ಅವನ ಜೊತೆ ಯಾರೆಲ್ಲ ಇದ್ದರೋ ಅವರೆಲ್ಲ ನಮ್ಮ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ತನಿಖಾಧಿಕಾರಿ: ಅದರಿಂದ ನೋವಾಗುತ್ತಿದೆ ಎಮದು ನೀವು ನಿಮ್ಮ ಸರ್​ಗೆ ಹೇಳಲಿಲ್ಲವೇ..?

ಸಂತ್ರಸ್ತ ಬಾಲಕಿ: ನಾವು ಪದೇ ಪದೇ ಹೇಳಿದರೂ ಅವನು ಕಿವಿಗೆ ಹಾಕಿಕೊಳ್ಳಲಿಲ್ಲ.

ತನಿಖಾಧಿಕಾರಿ: ಈ ಅಸ್ವಸ್ಥನಂತೆ(ಮತ್ತೊಂದು ಫೋಟೋ ತೋರಿಸುತ್ತಾ) ಕಾಣುತ್ತಿರುವ ವ್ಯಕ್ತಿ ನಿಮ್ಮ ಮೇಲೆ ದೌರ್ಜನ್ಯ ಎಸಗಲು ಹೇಗೆ ಸಾಧ್ಯ..?

ಸಂತ್ರಸ್ತ ಬಾಲಕಿ: ಕಳೆದ ಎರಡು ತಿಂಗಳಿಂದ ಈತ ಅಸ್ವಸ್ಥನಾಗಿದ್ದಾನೆ. ಅದಕ್ಕೂ ಮುನ್ನ ಚೆನ್ನಾಗಿಯೇ ಇದ್ದ. ಕನ್ನಡಕ ಹಾಕ್ಕೊಂಡು ಸುತ್ತಾಡುತ್ತಿದ್ದ.

ತನಿಖಾಧಿಕಾರಿ: ನಾನು ನಿಮ್ಮ ಮಗಳಿದ್ದಂತೆ ಎಂದು ನೀವು ಹೇಳಲಿಲ್ಲವಾ..?

ಸಂತ್ರಸ್ತ ಬಾಲಕಿ: ಪ್ರತೀ ಬಾರಿ ನಾವದನ್ನ ಹೇಳುತ್ತಿದ್ದರೂ ಬಿಡದೇ ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದರು.

ತನಿಖಾಧಿಕಾರಿ: ದೌರ್ಜನ್ಯ ಎಸಗುವಾಗ ನಿಮ್ಮನ್ನ ಯಾರಾದರೂ ಹಿಡಿದುಕೊಂಡಿರುತ್ತಿದ್ದರಾ..?

ಸಂತ್ರಸ್ತ ಬಾಲಕಿ: ಇಬ್ಬರು ಬಾಲಕರು ಯಾವಾಗಲೂ ಅವರ ಜೊತೆ ಇರುತ್ತಿದ್ದರು. ಅವನ ಹೆಂಡತಿ ಹೊರಗೆ ಹೊದ ಕೂಡಲೇ ನಮ್ಮ ಕೊಠಡಿಗೆ ಬಂದು ಕಿರುಕುಳ ಕೊಡುತ್ತಿದ್ದರು.

ತನಿಖಾಧಿಕಾರಿ: ಯಾವ ಸ್ಥಳದಲ್ಲಿ ಅವರು ನಿಮ್ಮ ಮೇಲೆ ಇಂಥಾ ಕೃತ್ಯ ಎಸಗುತ್ತಿದ್ದರು..?

ಸಂತ್ರಸ್ಥ ಬಾಲಕಿ: ಮೇಲ್ಮಹಡಿಯ ಕೊಠಡಿಯಲ್ಲಿ ನಡೆಯುತ್ತಿತ್ತು.

ತನಿಖಾಧಿಕಾರಿ: ಅತ್ಯಾಚಾರದ ಸಂದರ್ಭ ಅವರು ಏನನ್ನಾದರೂ ಬಳಕೆ ಮಾಡುತ್ತಿದ್ದರಾ..?

ಸಂತ್ರಸ್ತ ಬಾಲಕಿ: ಹೌದು, ಅವರು ಕಾಂಡೂಮ್ ಬಳಸುತ್ತಿದ್ದರು. ಆರಂಭದಲ್ಲಿ ಅದರ ಬಗ್ಗೆ ಭಯವಾಗುತ್ತಿತ್ತು, ಈಗಿಲ್ಲ.

ತನಿಖಾಧಿಕಾರಿ: ಸಂಜೆ ಅಲ್ಲಿ ನಡೆಯುತ್ತಿದ್ದ ಚಟುವಟಿಕೆಗಳ ಬಗ್ಗೆ ಹೇಳಿ..?

ಸಂತ್ರಸ್ತ ಬಾಲಕಿ: ಸಂಜೆ ವೇಳೆ ಅವರು ಅಶ್ಲೀಲ ಹಾಡುಗಳನ್ನ ಹಾಕುತ್ತಿದ್ದರು.

ತನಿಖಾಧಿಕಾರಿ: ಈಗ ಯಾರ ಬಗ್ಗೆಯೂ ಭಯ ಪಡಬೇಡಿ. ಓಕೆ..?

ಸಂತ್ರಸ್ತ ಬಾಲಕಿ: ನಾವು ಇಲ್ಲಿ ಇರುವುದಿಲ್ಲ. ನಾವು ಬೇರೆ ಕಡೆಗೆ ಹೋಗಬೇಕು.

ತನಿಖಾಧಿಕಾರಿ: ನಿಮ್ಮ ಮೇಲೆ ಈ ರೀತಿಯ ಕೃತ್ಯ ಎಸಗಿದಾಗ ನೀವ್ಯಾಕೆ ಅಲ್ಲಿ ಕೆಲಸ ಮಾಡುವ ಆಂಟಿಯರಿಗೆ ಹೇಳಲಿಲ್ಲ..?

ಸಂತ್ರಸ್ತ ಬಾಲಕಿ: ಬ್ರಜೇಶ್ ಠಾಕೂರ್ ಜೊತೆಗೆ ಆಂಟಿಯರು ಸಹ ಸೇರಿಕೊಂಡಿದ್ದರು. ಅವನನ್ನ ಕಂಡರೆ ಎಲ್ಲರೂ ಭಯಪಡುತ್ತಿದ್ದರು. ಅದಕ್ಕೆ ಅವರು ಈ ಕುಕೃತ್ಯಕ್ಕೆ ಸಹಕಾರ ನೀಡುತ್ತಿದ್ದರು. ಒಮ್ಮೆ ಅವನು ಚಂದಾ ಆಂಟಿ ಕಪಾಳಕ್ಕೆ ಹೊಡೆದದ್ದು ನೆನಪಿದೆ

ತನಿಖಾಧಿಕಾರಿ: ಹಾಗಾದರೆ, ಅಲ್ಲಿ ಕೆಲಸ ಮಾಡುವ ಆಂಟಿಯರ ತಪ್ಪಿಲ್ಲವಾ..?

ಸಂತ್ರಸ್ತ ಬಾಲಕಿ: ಅವರದ್ದೇನೂ ತಪ್ಪಿಲ್ಲ. ನಮ್ಮ ಮೇಲೆ ನಡೆಯುತ್ತಿದ್ದ ದೌರ್ಜನ್ಯ ತಡೆಯಲು ಅವರಿಂದ ಸಾಧ್ಯವಾಗಲಿಲ್ಲ. ಬೇರೆ ಹುಡುಗಿಯರ ದಾರಿ ತಪ್ಪಿಸಿದ್ದರಲ್ಲಿ ಕಿರಣ್ ಅಂಟಿ ಪಾತ್ರವಿದೆ.

ವೈದ್ಯಕೀಯ ವರದಿ ಪ್ರಕಾರ, ವಸತಿ ನಿಲಯದಲ್ಲಿ ವಾಸಿಸುತ್ತಿದ್ದ 42 ಬಾಲಕಿಯರ ಪೈಕಿ 34 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಎಲ್ಲರೂ 18ವರ್ಷ ಒಳಗಿನವರು. ಈ ಕುಕೃತ್ಯದಲ್ಲಿ ವಸತಿ ನಿಲಯ ನಡೆಸುತ್ತಿದ್ದ ಬ್ರಜೇಶ್ ಠಾಕೂರ್ ಪಾತ್ರದ ಬಗ್ಗೆ ಸಂತ್ರಸ್ತ ಬಾಲಕಿಯರೆಲ್ಲರೂ ಹೇಳಿಕೆ ದಾಖಲಿಸಿರುವುದಾಗಿ ಎಂದು ಮುಜಾಫರ್​ಪುರ್​ನ ಮಕ್ಕಳ ರಕ್ಷಣಾಧಿಕಾರಿ ರವಿಕುಮಾರ್, ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಾರೆ.

ಪ್ರಕರಣ ಸಂಬಂಧ ಠಾಕೂರ್ ಮತ್ತು ರೋಶನ್ ಇಬ್ಬರನ್ನೂ ಬಂಧಿಸಲಾಗಿದ್ದು, ವಸತಿ ನಿಲಯವನ್ನ ಕಪ್ಪು ಪಟ್ಟಿಗೆ ಸೇರಿಸಲಾಗಿದೆ.

Comments are closed.