ಕರ್ನಾಟಕ

ಜೈಲು ಶಿಕ್ಷೆಯ ನಂತರ ಬದಲಾಗಿದ್ದೇನೆ; ಮೊಹಮ್ಮದ್ ನಲಪಾಡ್​

Pinterest LinkedIn Tumblr


ಬೆಂಗಳೂರು: ವಿದ್ವತ್​ ಹಲ್ಲೆ ಪ್ರಕರಣದಲ್ಲಿ 117ದಿನಗಳ ಕಾಲ ಸೆರೆವಾಸ ಅನುಭವಿಸಿದ್ದ ಶಾಂತಿನಗರ ಶಾಸಕ ಹ್ಯಾರಿಸ್​ ಪುತ್ರ ಮೊಹಮದ್​ ನಲಪಾಡ್​ ಈಗ ಸಂಪೂರ್ಣ ಬದಲಾಗಿದ್ದು, ಜನರ ಕಷ್ಟ ಅರಿವಾಗಿದೆ ಎಂದಿದ್ದಾರೆ.

ನ್ಯೂಸ್​ 18 ಕನ್ನಡ ಜೊತೆಯಲ್ಲಿ ಮಾತನಾಡಿದ ಅವರು, ಜೈಲಿಗೆ ಹೋಗಿ ಬಂದ ನಂತರ ಕಷ್ಟದ ಅರಿವಾಗಿದೆ. ಪಶ್ಚತಾಪದಿಂದ ಪಾಠ ಕಲಿತಿದ್ದೇನೆ . ಆದರೆ ನಾನು ಎಲ್ಲಿ ತಪ್ಪು ಮಾಡಿದೆ ಎಂದು ತಿಳಿಯುತ್ತಿಲ್ಲ. ನಾನು ಶಾಸಕರ ಮಗ ಎಂಬ ಕಾರಣಕ್ಕೆ ಹಲ್ಲೆ ದೊಡ್ಡ ಸುದ್ದಿಯಾಯಿತು. ಅದೆ ಸಾಮಾನ್ಯ ವ್ಯಕ್ತಿಯ ಮಗನಾಗಿದ್ದರೆ ಇಷ್ಟು ದೊಡ್ಡ ಸುದ್ದಿಯಾಗುತ್ತಿರಲಿಲ್ಲ ಎಂದಿದ್ದಾರೆ.

ಘಟನೆಯಿಂದ ಕುಟುಂಬಕ್ಕೆ ತುಂಬಾ ನೋವುಂಟಾಯಿತು. ಹಾಗೆಂದು ಈ ಹಿಂದೆ ನೋವು ಕೊಟ್ಟಿದ್ದೇನೆ ಎಂದು ಹೇಳಲ್ಲ. ಘಟನೆ ಆದಾಗ ನನ್ನ ಬಗ್ಗೆ ತುಂಬಾ ಅಪಪ್ರಚಾರ ನಡೆಯಿತು. ಈ ನಾಲ್ಕು ತಿಂಗಳು ನಾನು ನೋವು ಅನುಭವಿಸಿದ್ದೇನೆ. ನನ್ನ ತಪ್ಪಿನಿಂದ ನಾನು ನೋವು ಅನುಭವಿಸಿದ್ದೇನೆ ಮತ್ತು ಕುಟುಂಬಕ್ಕೂ ಕಷ್ಟ ಕೊಟ್ಟಿದ್ದೇನೆ. ಆದರೆ ಇನ್ನು ಎಂದೂ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ. ಜೈಲುವಾಸದಿಂದ ನನ್ನಲ್ಲಿ ಪರಿವರ್ತನೆಯಾಗಿದೆ. ನನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟಿದ್ಧೇನೆ ಎಂದು ನಲಪಾಡ್​ ನ್ಯೂಸ್​ 18 ಜತೆ ಮಾತನಾಡುವಾಗ ಮನ ಬಿಚ್ಚಿದರು.

ಕಾನೂನಿನ ಮೇಲೆ ನನಗೆ ಸಂಪೂರ್ಣ ನಂಬಿಕೆ ಇತ್ತು. ನಾನು ದುರಂಹಕಾರಿ ಅಲ್ಲ, ಶಾಂತಿನಗರ ಜನರಲ್ಲಿ ಕೇಳಿ. ನಾನು ಮಾತನಾಡುವ ರೀತಿಯಿಂದ ಜನ ದುರಂಹಕಾರಿ ಎನ್ನಬಹುದು. ಆದರೆ ಸತ್ಯ ಗೊತ್ತಿರುವುದು ನನಗೆ ಹತ್ತಿರದಲ್ಲಿರುವ ಕೆಲವರಿಗೆ ಮಾತ್ರ, ಎನ್ನುತ್ತಾರೆ ನಲಪಾಡ್​.

ಜೈಲಿನಲ್ಲಿದ್ದಾಗ ಜನರ ಸಂಕಷ್ಟಗಳ ಬಗ್ಗೆ ಚೆನ್ನಾಗಿ ಅರಿತಿದ್ದೇನೆ. ಜೈಲಿನಲ್ಲಿರುವ ಬಡವರ ಕಷ್ಟಕ್ಕೆ ಇನ್ನು ಮುಂದೆ ನೆರವಾಗುತ್ತೇನೆ. ಜೈಲಿನಲ್ಲಿ ಎಷ್ಟೋ ಮಂದಿ 2 ಸಾವಿರ ರೂ. ದಂಡ ಕಟ್ಟಲಾಗದೆ ವರ್ಷಗಟ್ಟಲೆ ಜೈಲಿನಲ್ಲಿದ್ದಾರೆ. ಅವರಿಗೆ ನೆರವಾಗುತ್ತೇನೆ ಎಂದರು.

ಜಗಳ ಆಗಿದ್ದು ಆಕಸ್ಮಿಕ ಘಟನೆಯಿಂದ. ಬೇಂಕೆದು ಹಲ್ಲೆಯನ್ನು ಮಾಡಿಲ್ಲ. ನನ್ನ ಸ್ಥಿತಿ ಕಂಡು ತಂದೆ ಎಸಿ ಆಫ್​ ಮಾಡಿ ಮಲಗುತ್ತಿದ್ದರಂತೆ . ಆ ಸುದ್ದಿ ಕೇಳಿ ನಾನು ತುಂಬಾ ಭಾವುಕನಾಗಿದ್ದೆ. ತಂದೆ ಮೇಲೆ ಕೋಪ ಮಾಡಿಕೊಂಡಿದ್ದರು ಎನ್ನುವುದು ಶುದ್ಧ ಸುಳ್ಳು, ಎಂದು ತಂದೆ ಹ್ಯಾರಿಸ್​ ಬಗ್ಗೆ ನಲಪಾಡ್​ ಮಾತನಾಡಿದರು.

ವಿದ್ವತ್​ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿಲ್ಲ. ಆತ ಯಾರೆಂಬುದು ಕೂಡ ನನಗೆ ತಿಳಿದಿರಲಿಲ್ಲ. ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದ ನಲಪಾಡ್​, ಜೈಲುವಾಸದ ಬಳಿಕ ಹೊರಗೆ ಹೋಗುವುದು ಕಡಿಮೆ ಆಗಿದೆ ಎಂದರು. ಜನ ನಲಪಾಡ್​ ಎಂದು ಬೇರೆ ರೀತಿಯಲ್ಲಿ ನನ್ನನ್ನು ಗುರುತಿಸುತ್ತಾರೆ. ಆದರೆ ನಾನು ಬದಲಾಗಿದ್ದೇನೆ ಎಂದರು.

Comments are closed.