ಕರಾವಳಿ

ಮಂಗಳೂರಿನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಕಟ್ಟಡದಿಂದ ಹಾರಿ ಆತ್ಮಹತ್ಯೆ

Pinterest LinkedIn Tumblr

ಮಂಗಳೂರು, ಜುಲೈ.25: ನಗರದ ಹೊರ ವಲಯದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೋರ್ವ ನಗರ ಹಂಪನ್ ಕಟ್ಟೆ ಸಂಇಪದ ಕಟ್ಟಡವೊಂದರಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.

ಆತ್ಮಹತ್ಯೆ ಮಾಡಿರುವ ವಿದ್ಯಾರ್ಥಿಯನ್ನು ನಗರ ಹೊರವಲಯದ ವಳಚಿಲ್‌ನಲ್ಲಿರುವ ಶ್ರೀನಿವಾಸ್ ಕಾಲೇಜಿನ ಇಂಜಿನಿಯರಿಂಗ್ ಕಲಿಯುತ್ತಿರುವ ವಿದ್ಯಾರ್ಥಿ. ಜಪ್ಪಿನಮೊಗರು ನಿವಾಸಿ ಮನೋಜ್ ಎಂಬವರ ಪುತ್ರ ಗುರುಪ್ರಸಾದ್ (20) ಎಂದು ಹೆಸರಿಸಲಾಗಿದೆ.

ಈತ ಕೆಲವು ಸಮಯದಿಂದ ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಬೆಳಗ್ಗೆ ಸುಮಾರು 8:30ಕ್ಕೆ ಹಂಪನಕಟ್ಟೆ ಸಮೀಪದ ಕಟ್ಟಡವೊಂದರಿಂದ ಹಾರಿದ್ದಾನೆ. ತಕ್ಷಣ ಅಲ್ಲಿದ್ದವರು ಪೊಲೀಸರ ಸಹಕಾರದಿಂದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಕೊನೆಯುಸಿರೆಳೆದ ಎಂದು ತಿಳಿದುಬಂದಿದೆ.

ಮನೋಜ್ ಅವರು ನಗರದಲ್ಲಿ ಉದ್ಯೋಗಿಯಾಗಿದ್ದು, ದಿನಾ ಬೆಳಗ್ಗೆ ತನ್ನ ಮಗನನ್ನು ಕಂಕನಾಡಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗುತ್ತಿದ್ದರು. ಅಲ್ಲಿಂದ ಗುರುಪ್ರಸಾದ್ ಕಾಲೇಜಿಗೆ ತೆರಳುತ್ತಿದ್ದ. ಎಂದಿನಂತೆ ಇಂದು ಕೂಡಾ ಮನೋಜ್‌ನನ್ನು ಕಂಕನಾಡಿ ಬಸ್ ನಿಲ್ದಾಣದ ಬಳಿ ಬಿಟ್ಟು ಕೆಲಸಕ್ಕೆ ಹೋಗಿದ್ದಾರೆ. ಆದರೆ, ಗುರುಪ್ರಸಾದ್ ಕಾಲೇಜಿಗೆ ಹೋಗದೆ ನೇರ ಹಂಪನಕಟ್ಟೆಯ ಖಾಸಗಿ ಕಟ್ಟಡ ಹತ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ಬಂದರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Comments are closed.