ಕರಾವಳಿ

ಮೀನುಗಾರಿಕೆ ತೆರಳಿದ್ದ ವೇಳೆ ಸಮುದ್ರದಲೆ ಅಪ್ಪಳಿಸಿ ಇಬ್ಬರು ದುರ್ಮರಣ

Pinterest LinkedIn Tumblr

ಉಡುಪಿ: ಮಲ್ಪೆಯ ಪಡುಕರೆ ತೀರದಲ್ಲಿ ದೋಣಿ ಎಳೆಯುತ್ತಿರುವ ವೇಳೆ ಬೃಹತ್ ಅಲೆ ಅಪ್ಪಳಿಸಿದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಉದ್ಯಾವರ ಪಿತ್ರೋಡಿಯ ನಿತೇಶ್ (29), ನಿಶಾಂತ್ (22) ಎಂದು ಗುರುತಿಸಲಾಗಿದೆ.

ಇಂದು ಬೆಳಗ್ಗೆ ಮೀನುಗಾರಿಕೆ ಮುಗಿಸಿ ದಡಕ್ಕೆ ಬಂದಿದ್ದು, ಸುಮಾರು 200 ಮೀ. ದೂರದಲ್ಲಿ ಎಂಬತ್ತಕ್ಕೂ ಅಧಿಕ ಮಂದಿ ದೋಣಿಯನ್ನು ದಡಕ್ಕೆ ಎಳೆಯುವ ವೇಳೆ ಬೃಹತ್ ಅಲೆ ಅಪ್ಪಳಿಸಿದೆ ಎಂದು ತಿಳಿದುಬಂದಿದೆ. ಈ ವೇಳೆ ನೀರು ಪಾಲದ ನಿತೇಶ್ ಮ್ರತಪಟ್ಟಿದ್ದು ನಿಶಾಂತ್ ಎಂಬವರು ಕೊಚ್ಚಿ ಹೋಗಿ ನಾಪತ್ತೆಯಾಗಿ ಬಳಿಕ ಶವವಾಗಿ ಪತ್ತೆಯಾಗಿದ್ದಾರೆ.

ಮಲ್ಪೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತಿದ್ದಾರೆ.

Comments are closed.