ಕರ್ನಾಟಕ

ಪ್ರತೀಕೂಲ ಹವಾಮಾನ : ದೇವೇಗೌಡ ಅಮರನಾಥ ಯಾತ್ರೆ ರದ್ದು

Pinterest LinkedIn Tumblr


ಬೆಂಗಳೂರು: ಜಮ್ಮು ಪ್ರಾಂತ್ಯದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣದಿಂದ ಇಂದು ಆರಂಭವಾಗಬೇಕಿದ್ದ ಮಾಜಿ ಪ್ರಧಾನಿ , ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕುಟುಂಬ ಸದಸ್ಯರೊಂದಿಗಿನ ಅಮರನಾಥ ಯಾತ್ರೆ ರದ್ದಾಗಿದೆ.

ಎಚ್‌ಡಿಡಿ ಅವರು ಪತ್ನಿ ಚೆನ್ನಮ್ಮ, ಪುತ್ರ ಸಚಿವ ಎಚ್‌.ಡಿ.ರೇವಣ್ಣ ,ಸೊಸೆ ಭವಾನಿ ಮತ್ತು ಮೊಮ್ಮಕ್ಕಳೊಂದಿಗೆ ಯಾತ್ರೆಗೆ ಹೊರಟಿದ್ದರು. ಬುಧವಾರ ಯಾತ್ರೆ ಆರಂಭವಾಗಬೇಕಿತ್ತು.

ಗ್ರಹಣ ದೋಷ ಪರಿಹಾರಕ್ಕಾಗಿ ಗುಹಾಂತರ ದೇಗುಲಕ್ಕೆ ಯಾತ್ರೆ ಹೊರಟಿದ್ದರು ಎಂದು ತಿಳಿದು ಬಂದಿದ್ದು, ತಿರುಪತಿ ಯಾತ್ರೆಗೂ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

ಜುಲೈ28 ಗ್ರಹಣದ ಮರುದಿನ ಗವಿ ಗಂಗಾಧರೇಶ್ವರ ದೇಗುಲದಲ್ಲಿ ವಿಶೇಷ ಹೋಮ ಹವನಗಳನ್ನು ನಡೆಸಲಿದ್ದಾರೆ.

Comments are closed.