ಕರ್ನಾಟಕ

ಸದನದಲ್ಲಿ ಯಡಿಯೂರಪ್ಪ ನಿಮಗೆ ವಯಸ್ಸಾಯ್ತು.. ಎಂದ ಸಿದ್ದರಾಮಯ್ಯ!

Pinterest LinkedIn Tumblr


ಬೆಂಗಳರೂರು: ಕುಳಿತುಕೊಳ್ಳಿ ಯಡಿಯೂರಪ್ಪ..ನೀವು ಕ್ಷಮೆ ಎಲ್ಲಾ ಕೇಳಬೇಡಿ.ನಿಮಗೆ ವಯಸ್ಸಾಯ್ತು…ಹೀಗೆ ಸದನದಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವ ವೇಳೆ ಮಾಜಿ ಮುಖ್ಯಮಂತ್ರಿ ,ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹಾಸ್ಯ ಮಾಡಿ ಸದಸ್ಯರನ್ನೆಲ್ಲಾ ನಗೆ ಗಡಲಲ್ಲಿ ತೇಲಿಸಿದರು.

ಹಿಂದಿನ ಕಾಂಗ್ರೆಸ್‌ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂಪಾಯಿಯಂತೆ 5 ವರ್ಷಕ್ಕೆ 50 ಸಾವಿರ ಕೋಟಿ ರೂಪಾಯಿ ವಿನಿಯೋಗ ಮಾಡುವುದಾಗಿ ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಹೇಳಿದ್ದರು. ಈ ಬಗ್ಗೆ ನಮ್ಮಲ್ಲಿ ಸಾಕ್ಷಿ ಇದೆ ಎಂದು ಬಿಜೆಪಿ ಸದಸ್ಯರು ಸರ್ಕಾರದ ಮೇಲೆ ಮುಗಿ ಬಿದ್ದಿದ್ದರು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ನಾವು ಹಾಗೇ ಹೇಳಿಲ್ಲ.ಆಶ್ವಾಸನೆಯನ್ನೂ ಕೊಟ್ಟಿಲ್ಲ.5ವರ್ಷಗಳಿಂದ ಇದನ್ನೆ ಹೇಳುತ್ತಾ ಬಂದಿದ್ದೀರಿ. ನಿನ್ನೆ ಕಾರಜೋಳ ಅವರೂ ಇದನ್ನೆ ಹೇಳಿದ್ದರು. ನಿಮ್ಮಹತ್ರ ಪ್ರಣಾಳಿಕೆ ಇದೆಯಾ?.
ನೀವು ದಾಖಲೆಗಳನ್ನು ತಂದು ತೋರಿಸಿ ಎಂದರು.

ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ‘ನಮ್ಮ ಬಳಿ ದಾಖಲೆಗಳಿವೆ’ ಎಂದರು. ಈ ವೇಳೆ ಯಡಿಯೂರಪ್ಪ ಅವರು ತಲೆ ಅಲ್ಲಾಡಿಸುತ್ತಿದ್ದರು.

ನಗುನಗುತ್ತಾ ಮಾತನಾಡಿದ ಸಿದ್ದರಾಮಯ್ಯ ‘ಯಡಿಯೂರಪ್ಪನವರು ತಲೆ ಅಲ್ಲಾಡಿಸುತ್ತಿದ್ದಾರೆ.ಸ್ವಾಭಾವಿಕವಾಗಿ ಅಲ್ಲಾಡಿಸುತ್ತಿದ್ದೀರಾ? ಏನೂ ಬೇಕೂ ಅಂತಾನ’..ಎಂದರು.

ಯಡಿಯೂರಪ್ಪ ಪ್ರತಿಕ್ರಿಯಿಸಿ ‘ನಮ್ಮಲ್ಲಿ ದಾಖಲೆ ಇಲ್ಲಾ ಅಂತಾದರೆ ನಾವು ನಿಮ್ಮ ಕ್ಷಮೆ ಕೇಳಲು ಸಿದ್ದ’ ಎಂದರು.

ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ ‘ಯಡಿಯೂರಪ್ಪ ಕುಳಿತುಕೊಳ್ಳಿ..ನೀವು ಕ್ಷಮೆ ಕೇಳಬೇಕಾಗಿಲ್ಲ.ನಿಮಗೆ ವಯಸ್ಸಾಗಿದೆ’ ಎಂದರು. ಈ ವೇಳೆ ಸದನ ನಗೆ ಗಡಲಲ್ಲಿ ತೇಲಾಡಿತು.

Comments are closed.