ಕರ್ನಾಟಕ

ವಿಜಯಪುರ: ಬಕ್ರೀದ್‌ ಹಬ್ಬದಂದು ಗೋವು ಜೊತೆ ಸೈತಾನ ಬಲಿಯಾಗದಿರಲಿ: ಧರ್ಮಗುರು !

Pinterest LinkedIn Tumblr


ವಿಜಯಪುರ: ಇಲ್ಲಿನ ಹಾಶೀಮ್‌ ಪೀರ್‌ ದರ್ಗಾದ ಧರ್ಮಗುರುವೊಬ್ಬರು ರಂಜಾನ್‌ ಪವಿತ್ರ ದಿನದಂದು ಕೋಮು ಪ್ರಚೋದನಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.

ರಂಜಾನ್‌ ಧಾರ್ಮಿಕ ಉಪನ್ಯಾಸದ ವೇಳೆ ತನ್ವೀರ್‌ ಪೀರ್‌ ಹಾಶ್ಮಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು, 2 ತಿಂಗಳಲ್ಲಿ ಬಕ್ರೀದ್‌ ಬರಲಿದೆ. ಆಗ ಗೋವುಗಳ ಕುರ್ಬಾನಿ ಮಾಡುತ್ತೇವೆ. ಆಗ ಸೈತಾನ್‌ ತಿರುಗಿ ಬೀಳುತ್ತಾನೆ. ಗಮನದಲ್ಲಿಟ್ಟುಕೊಳ್ಳಿ ಗೋವುಗಳ ಜೊತೆ ಇನ್ನೊಂದು ಬಲಿ ಆಗದಿರಲಿ ಎಂದಿದ್ದಾರೆ.

ಬಿಲದೊಳಗಿದ್ದ ದೇಶದ್ರೋಹಿಳೆಲ್ಲಾ ಹೊರಗೆ ಬಂದಿದ್ದಾರೆ ಅವರ ಬಗ್ಗೆ ಜಾಗೃತೆಯಿಂದ ಇರಿ ಎಂದಿದ್ದಾರೆ.

ಸಚಿವ ಶಿವಾನಂದ ಪಾಟೀಲ್‌ ಅವರ ಸಮ್ಮುಖದಲ್ಲೇ ಈ ಹೇಳಿಕೆ ನೀಡಿದ್ದಾರೆ.

ಸಮಾರಂಭದ ಬಳಿಕ ಮುಸ್ಲಿಂ ಸಮುದಾಯದ ಮುಖಂಡರ ಬಳಿಕ ಸಚಿವ ಪಾಟೀಲ್‌ ತೀವ್ರ ಅಸಮಧಾನ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಉದ್ದೇಶಿಸಿ ಈ ಹೇಳಿಕೆ ನೀಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಯತ್ನಾಳ್‌ ಕೆಲ ದಿನಗಳ ಹಿಂದೆ ಮುಸ್ಲಿಮರ ಪರ ಕೆಲಸ ಮಾಡಬೇಡಿ ಅವರು ನನಗೆ ಮತ ಹಾಕಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

Comments are closed.