ರಾಷ್ಟ್ರೀಯ

ಪೂರ್ಣ ಸರಕಾರಿ ಗೌರವದೊಂದಿಗೆ ಯೋಧ ಔರಂಜಜೇಬ್‌ ಅಂತ್ಯ ಸಂಸ್ಕಾರ

Pinterest LinkedIn Tumblr

ಶ್ರೀನಗರ : ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಅಪಹರಣಗೊಂಡು ಉಗ್ರರಿಂದ ಹತನಾಗಿದ್ದ ರೈಫ‌ಲ್‌ ಮ್ಯಾನ್‌ ಔರಂಗಜೇಬ್‌ನ ಅಂತ್ಯಸಂಸ್ಕಾರ ಇಂದು ರಾಜೋರಿ ಜಿಲ್ಲೆಯ ಪೂಂಚ್‌ನಲ್ಲಿ ಪೂರ್ಣ ಸರಕಾರಿ ಗೌರವಗಳೊಂದಿಗೆ ನಡೆಯಿತು. ನೂರಾರು ದುಃಖತಪ್ತ ಜನರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಶ್ರದ್ಧಾಂಜಲಿ ಅರ್ಪಿಸಿದರು.

ಸೇನಾ ಸಿಬಂದಿಗಳು ಔರಂಗಜೇಬ್‌ ಪಾರ್ಥಿವ ಶರೀರದ ಮೇಲೆ ಪುಷ್ಪಮಾಲೆ ಇರಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಔರಂಗಜೇಬ್‌ ತಂದೆ, ಮಾಜಿ ಸೈನಿಕ ಮೊಹಮ್ಮದ್‌ ಹನೀಫ್ ಅವರು, “ನನ್ನ ಮಗ ದೇಶಕ್ಕಾಗಿ ತನ್ನನ್ನು ಬಲಿದಾನ ನೀಡುವ ತನ್ನ ಪ್ರತಿಜ್ಞೆಗೆ ಬದ್ಧನಾಗಿ ಪ್ರಾಣಾರ್ಪಣೆ ಮಾಡಿ ಅಂತಿಮವಾಗಿ ನನ್ನ ಬಳಿಗೆ ಮರಳಿದ್ದಾನೆ. ರಾಜ್ಯದಲ್ಲಿ ಬೇರೂರಿರುವ ಭಯೋತ್ಪಾದನೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಮೂಲೋತ್ಪಾಟನೆ ಮಾಡಬೇಕು ಎಂದು ನಾನು ಬಿನ್ನವಿಸುತ್ತೇನೆ’ ಎಂಬುದಾಗಿ ಹೇಳಿದರು.

Comments are closed.