ಕರ್ನಾಟಕ

ಇನ್ನು ಒಂದು ವರ್ಷವಾದರೂ ನಾನು ಆಡಳಿತ ಮಾಡುತ್ತೇನೆ: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು : 5 ವರ್ಷಗಳ ಕಾಲ ನಾನೇ ಸಿಎಂ ಎಂದಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ನೀಡಿದ ಹೇಳಿಕೆ ಸಮ್ಮಿಶ್ರ ಸರ್ಕಾರದ ಆಯಸ್ಸಿನ ಬಗ್ಗೆ ಪ್ರಶ್ನೆ ಹುಟ್ಟು ಹಾಕಿದೆ.

ಸಮಾರಂಭವೊಂದರಲ್ಲಿ ಮಾತನಾಡಿದ ಸಿಎಂ ಎಚ್‌ಡಿಕೆ ‘ಇನ್ನು ಒಂದು ವರ್ಷವಾದರೂ ನಾನು ಆಡಳಿತ ಮಾಡುತ್ತೇನೆ.ಲೋಕಸಭಾ ಚುನಾವಣೆ ವರೆಗೆ ಯಾರೂ ಟಚ್‌ ಮಾಡೋಕೆ ಆಗಲ್ಲ.ಹಾಗಂತ ನಾನು ಒಂದು ಕ್ಷಣವೂ ವ್ಯರ್ಥ ಮಾಡುವುದಿಲ್ಲ.ಪ್ರತೀ ಕ್ಷಣವೂ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತೇನೆ’ಎಂದಿದ್ದಾರೆ.

‘ ರೈತ ಸಾಲ ಮನ್ನಾದಲ್ಲಿ ಯಾವುದೇ ಗೊಂದಲ ಬೇಡ.ನಾನು ಯಾರಿಗೂ ಹೆದರಿ ಓಡುವುದಿಲ್ಲ’ ಎಂದರು.

‘ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ.ಪ್ರಕೃತಿ ನನ್ನ ಪರವಾಗಿದೆ’ ಎಂದರು.

‘ಒಳ್ಳೆಯ ಕೆಲಸ ಮಾಡಲು ಹೊರಟಾಗ ಕಾಲೆಳೆಯುವವರು ಹಲವು ಮಂದಿ ಇರುತ್ತಾರೆ’ ಎಂದರು.

Comments are closed.